ಕಾರ್ಕಳ

ನೀರೆ: ಶ್ರೀ ಬನಶಂಕರಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಕಾರ್ಕಳ : ನೀರೆ ಕಣಂಜಾರು ಗ್ರಾಮ ಪಂಚಾಯತ್ ಮಟ್ಟದ ಶ್ರೀ ಬನಶಂಕರಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಜೂ. 17ರಂದು ನೀರೆ ಕಣಂಜಾರು ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಸಂಜೀವಿನಿ ಸಭಾಭವನದಲ್ಲಿ ನಡೆಯಿತು.


ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಒಕ್ಕೂಟದ ಅಧ್ಯಕ್ಷೆ ಸುಪ್ರಿತಾ, ಶುಭವತಿ, ಅಮ್ಮಣ್ಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಆಡಳಿತ ಅಧಿಕಾರಿ, ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಕ್ರಂ ಹೆಗ್ಡೆ, ನೋಡೆಲ್ ಅಧಿಕಾರಿ ರಮೇಶ್ ಉಳ್ಳಗಡ್ಡಿ, ಬಿಟ್ ಪೊಲೀಸ್ ಯೋಗೀಶ್, ರಮೇಶ್ ಕಲ್ಲೊಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ಚಿಚಾರಕರಾದ ಉಮಾ ಮತ್ತು ಸಾಂತ್ವನ ಕೇಂದ್ರದ ಯಶೋಧರವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ 2025-26೬ನೇ ಸಾಲಿನಲ್ಲಿ ಸಿಐಎಫ್ ಸಾಲ ತೆಗೆದು ಸ್ವ ಉದ್ಯೋಗವನ್ನು ನಡೆಸುತ್ತಿರುವವರನ್ನು ಸನ್ಮಾನಿಸಲಾಯಿತು. ಗರ್ಭಿಣಿ ಬಾಣಂತಿಯರಿಗೆ ಆಹಾರ ಕಿಟ್ ನೀಡಿ ಗೌರವಿಸಲಾಯಿತು.


ಶಿಲ್ಪ ಹಾಗೂ ಸುನೀತಾ ಪ್ರಾರ್ಥಿಸಿದರು. ಶ್ರೀಮತಿ ಮಮತಾ ಸ್ವಾಗತಿಸಿದರು. ಶ್ರೀಮತಿ ವಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಹ್ವಾನ ಪತ್ರಿಕೆಯನ್ನು ಎಲ್‌ಸಿಆರ್‌ಪಿ ಪ್ರಮೀಳಾ ಸಭೆಗೆ ವಾಚಿಸಿದರು. ಕಾತ್ಯಾಯಿನಿ ಎಂ. ಬಿ. ಕೆ. ಮಹಾಸಭೆಯ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿ ವಾಚಿಸಿದರು. ಕೃಷಿ ಸಖಿ ಸೌಮ್ಯ ಗತಸಭೆಯ ನಡವಳಿಯನ್ನು ಮಂಡಿಸಿದರು.

ಸಂಜೀವಿನಿ ಮತ್ತು ಶ್ರೀ ಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Related posts

ಬೈಲೂರು ಬಸ್ರಿ ಶಾಲಾ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

Madhyama Bimba

ಮಹಾಮಸ್ತಕಾಭಿಷೇಕಕ್ಕೆ ವಿಶೇಷ ಅನುದಾನ ಸೇರಿದಂತೆ ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಹಲವು ಬೇಡಿಕೆಗಳು- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ವಿ. ಸುನಿಲ್ ಕುಮಾರ್

Madhyama Bimba

ಹೆಬ್ರಿ ಎಸ್ ಆರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ವಿಶೇಷ ಮಾರ್ಗದರ್ಶನ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More