ಮೂಡುಬಿದಿರೆ

ನೆಲ್ಲಿಕಾರುನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ನೆಲ್ಲಿಕಾರು ಗ್ರಾಮ ಪಂಚಾಯತ್‌ನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಸಭಾ ಕಾರ್ಯಕ್ರಮ ಹಾಗೂ ಪಂಚಾಯತ್ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.

ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯ ಅರಣ್ಯಧಿಕಾರಿ ಬಸಪ್ಪರವರು ಪರಿಸರ ದಿನಾಚರಣೆಯ ಹಾಗೂ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿ, ಎಲ್ಲರೂ ಪರಿಸರದಲ್ಲಿ ಗಿಡ ಮರಗಳನ್ನು ನೆಟ್ಟು ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡುವ ಕೆಲಸ ಆಗಬೇಕಾಗಿದೆ ಎಂದರು.

ವೇದಿಕೆಯಲ್ಲಿ ಪಂಚಾಯತ್ ಕಾರ್ಯದರ್ಶಿ ದಾಮೋದರ, ಅರಣ್ಯ ಪಾಲಕ ಧರ್ಮರಾಜ್, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಬ್ರಾಮರಿ ಸಂಜೀವಿನಿ ಒಕ್ಕೂಟದ ಶ್ರೀಮತಿ ಲತಾ, ಶ್ರೀಮತಿ ಯಶಶ್ವಿನಿ, ಶ್ರೀಮತಿ ವಿಜಯ, ಶ್ರೀಮತಿ ರಾಜಶ್ರೀ ಮತ್ತು ಗ್ರಾಮಸ್ಥರು ಹಾಜರಿದ್ದರು.

ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಧನ್ಯವಾದ ಸಲ್ಲಿಸಿದರು.
ಚಿತ್ರ: ನೆಲ್ಲಿಕಾರು

Related posts

ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮಕಲಶಕ್ಕೆ ದೇಣಿಗೆ ನೀಡಿದ ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್

Madhyama Bimba

ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಅವಹೇಳನಕಾರಿ ಹೇಳಿಕೆ- ಹಿಂಜಾವೇ ಮೂಡುಬಿದಿರೆ ಪೊಲೀಸ್ ಗೆ ದೂರು

Madhyama Bimba

ಜೂನ್ 25: ಮೂಡುಬಿದಿರೆಯಲ್ಲಿ ಲಯನ್ಸ್ ಹರಿಭವ ಸಭಾ ಭವನ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More