Blog

ಜೂ. 28: ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಾರ್ಕಳ ತಾಲೂಕು ಕಾರ್ಕಳ ವಲಯ, ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಉದ್ಯಾವರ ಮತ್ತು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಜೋಡುರಸ್ತೆ ಇವರ ಸಹಕಾರದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜೂ. 28ರಂದು ಕುಕ್ಕುಂದೂರು ಸಮುದಾಯ ಭವನದಲ್ಲಿ ಬೆಳಿಗ್ಗೆ ಗಂಟೆ 8.30ರಿಂದ ಮಧ್ಯಾಹ್ನ ಗಂಟೆ 1.00ರವರೆಗೆ ನಡೆಯಲಿದೆ.

ಈ ಶಿಬಿರದಲ್ಲಿ ಇಸಿಜಿ, ಪಾರ್ಶ್ವವಾಯು, ಸಂಧಿವಾತ, ಬೆನ್ನುಹುರಿ ಮತ್ತು ಕುತ್ತಿಗೆಯ ನರದ ತೊಂದರೆ, ಆಮ್ಲ ಪಿತ್ತ ಮತ್ತು ಕರುಳಿನ ಸಂಬಂಧಿ ಖಾಯಿಲೆ, ಚರ್ಮರೋಗ, ಸೋರಿಯಾಸಿಸ್, ಪೈಲ್ಸ್, ಪಿಸ್ತುಲಾ, ಸೈನಸ್, ಸ್ತ್ರೀರೋಗ, ಪ್ರಸೂತಿ ಸಂಬಂಧಿ ಖಾಯಿಲೆಗಳು, ಬಂಜೆತನ, ಗರ್ಭಸಂಸ್ಕಾರ, ಬಾಲ ರೋಗ (ಮಕ್ಕಳ ಚಿಕಿತ್ಸೆ), ಮನೋರೋಗ, ಅಸ್ತಮ ಮತ್ತು ಅಲರ್ಜಿ ಸಂಬಂಧಿ ಖಾಯಿಲೆ, ಶಿರಶೂಲ, ಕಣ್ಣು, ಕಣ್ಣಿನ ಪೊರೆಯ ತೊಂದರೆ, ಕಿವಿ, ಮೂಗು, ಗಂಟಲು ಸಮಸ್ಯೆಗಳು, ಮುಖ-ತ್ವಚೆ ಸೌಂದರ್ಯ, ಸ್ವಾಸ್ಥ್ಯ ರಕ್ಷಣೆ ಬಗ್ಗೆ, ಬೊಜ್ಜುತನ, ಥೈರಾಯಿಡ್ ಖಾಯಿಲೆ, ಮಧುಮೇಹ ತಪಾಸಣೆ, ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಮಾಹಿತಿಯೊಂದಿಗೆ ಎಲ್ಲಾ ರೋಗಗಳ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ಮಾಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶುಕ್ರವಾರ ಕೂಡಾ ರಜೆ

Madhyama Bimba

ಕಾರ್ಕಳ ಆಸ್ಪತ್ರೆಗೆ ವೈದ್ಯರ ನೇಮಕಾತಿ

Madhyama Bimba

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮಹಾಸಭೆ: ಸದಸ್ಯರಿಗೆ 9.5% ಲಾಭಾಂಶ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More