ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡಬಿದ್ರಿ ಅಂತರ್ ಜಿಲ್ಲಾ ಜಂಟಿ ಸಭೆ

ಮನುಷ್ಯ ಒಂದೇ ಕಡೆ ನಿಲ್ಲದೆ ಪ್ರವಾಸ ಮಾಡಿದುದರಿಂದಲೇ ಇತಿಹಾಸದ ಅರಿವು ಆಗಲು ಸಹಕಾರಿಯಾಯಿತು. ಪ್ರವಾಸ ಮಾಡುವುದರಿಂದ ನೈಜ ಅನುಭವವನ್ನು ಪಡೆಯಬಹುದು ಎಂದು ಜೆ.ಸಿ.ಐ.ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಟಿ.ವಿ.ಎನ್ ಮೂರ್ತಿಯವರು ಹೇಳಿದರು.


ಅವರು ಕಾರ್ಕಳ ಅನಂತಶಯನದ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡಬಿದ್ರಿ ಇದರ ಅಂತರ್ ಜಿಲ್ಲಾ ಜಂಟಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ರೋ.ಗಣೇಶ್ ಸಾಲಿಯಾನ್ ಸಂಪಾದಕತ್ವದ ಕ್ಲಬ್‌ನ ಗ್ರಹಪತ್ರಿಕೆ ಸರ್ವಿಸನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಜಂಟಿ ಸಭೆಗಳ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ರೋಟರಿ ಕ್ಲಬ್ಬಿನ ಅಧ್ಯಕ್ಷ ನಾಗರಾಜ್ ಹೆಗ್ಡೆ ಕಾರ್ಕಳ ಕ್ಲಬ್ಬಿನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು.

ಮೂಡಬಿದ್ರಿ ರೋಟರಿ ಕ್ಲಬ್‌ನ ಸದಸ್ಯ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿಎಂ ತನ್ನ ಕ್ಲಬ್‌ನ ಪರಿಚಯವನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಕಳದ ಬಜಗೋಳಿ ಸಮೀಪದ ಗೋವುಗಳಿಗಾಗಿ ಗೋಶಾಲೆಯ ಸ್ಥಾಪನೆ ಹಾಗೂ ನಿರ್ಗತಿಕ ಅಸೌಖ್ಯದಲ್ಲಿರುವ ಶ್ವಾನ, ಬೆಕ್ಕುಗಳಿಗೆ ಆಶ್ರಯ ನೀಡಿ ಆರೈಕೆ ಮಾಡುತ್ತಿರುವ ಎಂ. ಕೆ. ವೀರಂಜಯ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಲಯ 5 ರ ವಲಯ ಸೇನಾನಿ ಜಾನ್ ಆರ್ ಡಿ ಸಿಲ್ವ, ಮೂಡಬಿದ್ರೆ ಕ್ಲಬ್‌ನ ಕಾರ್ಯದರ್ಶಿ ಪವನ್ ಪೈ ವೇದಿಕೆಯಲ್ಲಿ ಉಪಸಿತರಿದ್ದು ಶುಭ ಹಾರೈಸಿದರು.

ಎರಡೂ ಕ್ಲಬ್‌ನ ಅಧ್ಯಕ್ಷರು ನೆನಪಿನ ಸಂಕೇತವಾಗಿ ಧ್ವಜ ವಿನಿಮಯವನ್ನು ಮಾಡಿಕೊಂಡರು.

ಅನೆಟ್ ಯಾಗ್ನಿಕಾ ಪ್ರಾರ್ಥಿಸಿದರು. ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.

 

Related posts

ಕ್ರೈಸ್ಟ್‌ಕಿಂಗ್: ಭಾರತೀಯ ಕಂಪೆನಿ ಸೆಕ್ರೆಟರಿ(ಸಿಎಸ್-ಇಇಟಿ) ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ

Madhyama Bimba

ದೊಂಡೇರಂಗಡಿ ದಿ. ಯತೀಶ್ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Madhyama Bimba

ಕಾರ್ಕಳ ಬೈಲೂರು ಕಣಜಾರು ಪಳ್ಳಿ ಮಾರ್ಗದಲ್ಲಿ ಸ್ಥಗಿತಗೊಂಡ ಬಸ್ಸು ಪುನರಾರಂಭಕ್ಕೆ ಒತ್ತಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More