Blog

ಜುಲೈ 07 : ಹೆಬ್ರಿಯಲ್ಲಿ ಗೋಪಾಲ ಭಂಡಾರಿ 75ನೇ ಜನ್ಮ ದಿನಾಚರಣೆ : ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಕಾರ್ಕಳದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿಯವರ 75ನೇ ಜನ್ಮ ದಿನಾಚರಣೆ ಸಲುವಾಗಿ ವಿವಿಧ ಸಾಧಕರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ಜುಲೈ 07ರಂದು 10ಗಂಟೆಗೆ ನಡೆಯಲಿದೆ.

ಗೋಪಾಲ ಭಂಡಾರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಮತ್ತು ಸಮಾಜ ಸೇವೆಯಲ್ಲಿ ಮುನಿಯಾಲು ದಿವಾಕರ ಶೆಟ್ಟಿ, ಶಿಕ್ಷಣ ಕ್ಷೇತ್ರದ ಸುಧಾರಕ ಹೆಬ್ರಿ ಎಸ್. ಆರ್. ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ನಾಗರಾಜ ಶೆಟ್ಟಿ, ಜೀವರಕ್ಷಕ ಈಶ್ವರ್ ಮಲ್ಪೆ, ರಾಜ್ಯ ಮಟ್ಟದ ರಂಗ ಕಲಾವಿದೆ ಸುಗಂಧಿ ಮುದ್ರಾಡಿ, ಧಾರ್ಮಿಕ ಮತ್ತು ಕಂಬಳ ಕ್ರೀಡಾ ಸಂಘಟಕ ಕಿರಣ್ ತೋಳಾರ್ ಬೇಳಂಜೆ, ಕೃಷಿ ಸಾಧಕ ಶಂಭು ನಾಯ್ಕ್ ಶಿವಪುರ ಕುಬ್ರಿ, ಸಮಾಜ ಸೇವಕ ಎಳ್ಳಾರೆ ರಾಘವ ದೇವಾಡಿಗ, ಮಹಿಳಾ ಸಬಲೀಕರಣದ ಸಮಾಜ ಸೇವಕಿ ಯಶೋದ ಶೆಟ್ಟಿ ಅಜೆಕಾರು, ಸಮಾಜ ಸೇವಕ ರೋನಿ ಮರ್ರೆ ಸೀತಾನದಿ ನಾಡ್ಪಾಲು ಮತ್ತು ನಿವೃತ್ತ ಸೈನಿಕ ಚಾರ ಉಳ್ಮುಂಡು ಪ್ರಶಾಂತ ಪೂಜಾರಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ.

ಬೇಳಂಜೆ, ಹೆಬ್ರಿ, ಶಿವಪುರ, ಮುನಿಯಾಲು, ಕುಕ್ಕುಜೆ, ಅಜೆಕಾರು ಮರ್ಣೆ, ಎಣ್ಣೆಹೊಳೆ, ಮುದ್ರಾಡಿ, ಶಿರ್ಲಾಲು ಗ್ರಾಮಗಳ ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲೆಗಳ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡುವರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಹೆಬ್ರಿಯ ಉದ್ಯಮಿ ಸಮಾಜ ಸೇವಕ ಸತೀಶ ಪೈ, ಪ್ರವೀಣ್ ಬಲ್ಲಾಳ್ ಹೆಬ್ರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ , ಮುನಿಯಾಲು ಗೋಪಿನಾಥ ಭಟ್, ಶುಭದ ರಾವ್ ಕಾರ್ಕಳ, ವಕೀಲ ಶೇಖರ ಮಡಿವಾಳ್ ಕಾರ್ಕಳ, ಭಂಡಾರಿ ಸಮಾಜದ ಅಧ್ಯಕ್ಷ ಗುರುದಾಸ ಭಂಡಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ರೇಷ್ಮಾ ಎಸ್, ಹೆಬ್ರಿಯ ಸುಮಾ ಎನ್ ಅಡ್ಯಂತಾಯ, ಕಾರ್ಕಳದ ಭಾನು ಭಾಸ್ಕರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದೀಪಾ ಭಂಡಾರಿ, ಕೊಶಾಧಿಕಾರಿ ಜನಾರ್ಧನ್ ಎಚ್, ನಿರ್ದೇಶಕರಾದ ವಾದಿರಾಜ ಶೆಟ್ಟಿ ಹೆಬ್ರಿ, ರಾಜೇಶ ಭಂಡಾರಿ ಹೆಬ್ರಿ, ನವೀನ್ ಕೆ ಅಡ್ಯಂತಾಯ ಹೆಬ್ರಿ, ಸುಕುಮಾರ್ ಮುನಿಯಾಲ್, ಗೋಪಿನಾಥ ಭಟ್ ಮುನಿಯಾಲು, ಮೂರ್ಸಾಲು ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ ಶಿವಪುರ, ಬೈಕಾಡಿ ಮಮಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು ಮತ್ತು ರಾಘವೇಂದ್ರ ನಾಯ್ಕ್ ಹೆಬ್ರಿ ಗೋಪಾಲ ಭಂಡಾರಿ ಜನ್ಮ ದಿನಾಚರಣೆಯ ಯಶಸ್ಸಿಗೆ ಸಹಕರಿಸಲಿದ್ದಾರೆ.

Related posts

ಸೋಮವಾರ ರಜೆ

Madhyama Bimba

ಜುಲೈ 2ರಂದು ದಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

Madhyama Bimba

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More