ಕಾರ್ಕಳ

ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಸರ್ಕಾರಿ ಪ್ರೌಢಶಾಲೆ ನಕ್ರೆ ಇವರ ಸಹಯೋಗದೊಂದಿಗೆ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶಾರ್ವಿ ಹೆಗ್ಡೆ (8ನೇ ತರಗತಿ) – ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ಸ್ಥಾನ, ಮಾನ್ವಿ ಜಿ (10ನೇ ತರಗತಿ) – ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ಪ್ರಥಮ ಸ್ಥಾನ, ಮಾನ್ವಿ ಜಿ (10ನೇ ತರಗತಿ) ಹಾಗೂ ಶಾರ್ವಿ ಹೆಗ್ಡೆ (8ನೇ ತರಗತಿ) – ರಿದಮಿಕ್ ಪೇರ್ ಮತ್ತು ಆರ್ಟಿಸ್ಟಿಕ್ ಪೇರ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

14 ವಯೋಮಾನದ ಬಾಲಕರ ವಿಭಾಗದಲ್ಲಿ ಮೇಘನ್ ಪೂಜಾರಿ (7ನೇ ತರಗತಿ) ಹಾಗೂ ಹನೀಶ್ ಕುಮಾರ್ (7ನೇ ತರಗತಿ) – ರಿದಮಿಕ್ ಪೇರ್ ಮತ್ತು ಆರ್ಟಿಸ್ಟಿಕ್ ಪೇರ್ ವಿಭಾಗಗಳಲ್ಲಿ ಪ್ರಥಮ ಸ್ಥಾನ, ಹನೀಶ್ ಕುಮಾರ್ (7ನೇ ತರಗತಿ) – ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ದ್ವಿತೀಯ ಸ್ಥಾನ, ಮೇಘನ್ ಪೂಜಾರಿ (7ನೇ ತರಗತಿ) – ಸಾಂಪ್ರದಾಯಿಕ ಯೋಗಾಸನದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸನಿಹಾ ಸಂತೋಷ್ (7ನೇ ತರಗತಿ) – ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ದ್ವಿತೀಯ ಸ್ಥಾನ, ಧ್ರುವಿ ಶೆಟ್ಟಿ ಹಾಗೂ ತ್ರಿಷಾ ಸಾಲಿಯಾನ್ (7ನೇ ತರಗತಿ) – ರಿದಮಿಕ್ ಪೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಸನಿಹಾ ಸಂತೋಷ್ ಹಾಗೂ ಆರಾಧ್ಯ (7ನೇ ತರಗತಿ) – ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

Related posts

ನಾರಾವಿ ಮಹಾ ಚಂಡಿಕಾ ಯಾಗ -2024: ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

Madhyama Bimba

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಕಾರ್ಯಕರ್ತರ ಧ್ವನಿ ಗಟ್ಟಿಯಾಗಬೇಕು: ವಿ. ಸುನಿಲ್ ಕುಮಾರ್

Madhyama Bimba

ಕ್ರೈಸ್ಟ್‌ಕಿಂಗ್: ತುಳುನಾಡ ಇತಿಹಾಸ ದರ್ಶನ ಉಪನ್ಯಾಸ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More