ಕಾರ್ಕಳಹೆಬ್ರಿ

ಬೈಲೂರು: ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ಬೈಲೂರು: ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ಜರಗಿತು.

ಅಂತರಾಷ್ಟ್ರೀಯ ಯೋಗ ಪಟು ನರೇಂದ್ರ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸಂತೋಷ ವಾಗ್ಲೆ ವಹಿಸಿದ್ದರು.

ನೀರೇಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರಶಾಂತ ಶೆಟ್ಟಿ ಗುತ್ತು ಮನೆ, ಉದ್ಯಮಿ ರಮೇಶ ಕಿಣಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರಾದ ಸ್ಟೀವನ್ ಡಿಸೋಜ, ನೀರೇ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರವೀಂದ್ರ ನಾಯಕ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ವಿಕ್ರಂ ಹೆಗ್ಡೆ ಕಣಜಾರು, ರಮೇಶ ಕಲ್ಲಟ್ಟೆ, ಹೈದರಾಲಿ, ಹರಿಶ್ಚಂದ್ರ ರಾವ್, ಸಂತೋಷ್ ನಾಯಕ್, ಎಸ್‌ಡಿಎಂಸಿ ಸದಸ್ಯರು, ತಾಲೂಕು ಕ್ರೀಡಾ ಸಮಿತಿಯ ಸಂಯೋಜಕರಾದ ಶರತ್ ರಾವ್ ಹಾಗೂ ಸದಸ್ಯರಾದ ಸೌಜನ್ಯ ಹೆಗಡೆ, ಉಪ ಪ್ರಾಂಶುಪಾಲರಾದ ನಾಗರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಸೀತಾರಾಮ ಭಟ್ ಸ್ವಾಗತಿಸಿದರು. ಕ್ರೀಡಾ ಸಂಚಾಲಕರಾದ ನಾರಾಯಣ ಧನ್ಯವಾದವಿತ್ತರು. ಉಪನ್ಯಾಸಕರಾದ ಪ್ರಮೋದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Related posts

ಸ. ಹಿ. ಪ್ರಾ. ಶಾಲೆ ಬಸ್ರಿ ಬೈಲೂರು: ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Madhyama Bimba

ಶಿವಪುರ-1 ಶಾಲೆಯಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ ಹಾಗೂ ವಿವಿಧ ಕೊಡುಗೆಗಳ ವಿತರಣೆ

Madhyama Bimba

ನಿವೃತ್ತ ಯೋಧ ನೀರೆ ಸಹದೇವ ನಾಯಕ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More