ಕಾರ್ಕಳ: ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ರಾಕೇಶ್ ಅಮೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.
ಹೋಟೆಲ್ ಪ್ರಕಾಶ್‌ನಲ್ಲಿ ಆ. 13ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುಕೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಖಿಲ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಸಾದ್ ಅಂಚನ್ ಹಾಗೂ ತಾಂತ್ರಿಕ ಕಾರ್ಯದರ್ಶಿಯಾಗಿ ಮಹೇಶ್ ಕುಲಾಲ್ ಆಯ್ಕೆಯಾಗಿದ್ದರು.
ಸಿವಿಲ್ ಇಂಜಿನಿಯರ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಪ್ರಕಾಶ್ ಆಚಾರ್ ಸಭೆಯ ಅಧ್ಯಕ್ಷತೆ ವಹಿಸಿದರು.
ಅಧ್ಯಕ್ಷರಾದ ರಾಕೇಶ್ ಅಮೀನ್ ಸ್ವಾಗತಿಸಿ, ಕೋಶಾಧಿಕಾರಿ ಸುಕೇಶ್ ಲೆಕ್ಕಪತ್ರ ಮಂಡಿಸಿದರು.
