ಮೂಡುಬಿದಿರೆ

ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ ಮಹಾಸಭೆ

ದೇವಾಲಯಗಳಿಗೆ ತೆರಳುವ ಮುನ್ನ ಹೆತ್ತವರನ್ನು ಪೂಜಿಸುವ ಸಂಸ್ಕಾರ ಯುವಜನತೆಯಲ್ಲಿ ಬೆಳೆಯಬೇಕು ಎಂದು ಜ್ಯೋತಿಷ್ಯ ಯೋಗಿ ಡಾ. ಸುಧಾಕರ ತಂತ್ರಿ ಹೇಳಿದರು.

ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ 14ನೇ ವರ್ಷದ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಾದ್ಯಗಳಿಗಿರುವ ಮಹತ್ವ ಶಿವನಿಂದ ಪ್ರಾರಂಭವಾಗಿದೆ. ವಾದ್ಯ ನುಡಿಸುವಾಗ ಭಗವಂತ ನಾಟ್ಯಶಂಕರನಾಗಿ ಕಂಗೊಳಿಸುವುದರಿಂದ ಲೋಕದ ದುಷ್ಟ ದೋಷಗಳು ಹಾಗೂ ತಮೋಗುಣಗಳು ದೂರವಾಗುತ್ತವೆ ಎಂದರು.

ಸಂಗೀತಕ್ಕೆ ಅದ್ಭುತ ರೋಗನಿವಾರಕ ಶಕ್ತಿಯಿದ್ದು, ವಾದ್ಯಗಳ ನಾದವು ಮನುಷ್ಯನ ದೇಹದಲ್ಲಿರುವ ಏಳು ಯೋಗ ಬಿಂದುಗಳನ್ನು ಜಾಗೃತಗೊಳಿಸುವ ಶಕ್ತಿ ಹೊಂದಿದೆ. ಡೋಲು, ನಾದಸ್ವರ ಸೇರಿದಂತೆ ಪ್ರತಿಯೊಂದು ವಾದ್ಯವೂ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ತ್ರಿಮೂರ್ತಿ ಸ್ವರೂಪವನ್ನು ಹೊಂದಿದೆ ಎಂದರು.

ಸಂಘದ ಗೌರವ ಸಲಹೆಗಾರರಾದ ವಕೀಲೆ ಶ್ವೇತಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಕಿಡಿಪ್ ಮೂಲಕ ನಿಧಿ ಸಂಗ್ರಹಿಸಿ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಸಂಘಟನಾತ್ಮಕ ಪ್ರಯತ್ನದಿಂದ ಸಂಘ ಬಲಿಷ್ಠಗೊಳ್ಳುತ್ತಿದೆ. ಕಲೆಯ ಜೊತೆಗೆ ಪರಿಸರ ಕಾಳಜಿಯೂ ಅಗತ್ಯ ಎಂದರು.

ಪುರಸಭಾ ಮಾಜಿ ಸದಸ್ಯರಾದ ಸುರೇಶ್ ಪ್ರಭು, ಪುರಂದರ ದೇವಾಡಿಗ, ಉದ್ಯಮಿ ಸುಶಾಂತ್ ಕರ್ಕೇರ ಮಾರೂರು ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಪ್ರಸ್ತಾವನೆಗೈದು, ಸಂಘದ ಹಾಗೂ ಸದಸ್ಯರ ಅಭಿವೃದ್ಧಿಗೆ ನಿಧಿಯನ್ನು ಇಡುವುದು ಮುಖ್ಯ. ಇತರ ಕಲಾ ಕ್ಷೇತ್ರಗಳಿಗೆ ಹೋಲಿಸಿದರೆ ವಾದ್ಯ ಕಲಾವಿದರನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು, ಸೂಕ್ತ ಸನ್ಮಾನ ಹಾಗೂ ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ. ಬೇರೆ ಕ್ಷೇತ್ರದ ಕಲಾವಿದರಿಗೆ ಸಿಗುವಂತಹ ಮೌಲ್ಯ, ಬಿರುದು ಹಾಗೂ ಸನ್ಮಾನಗಳು ವಾದ್ಯ ಕಲಾವಿದರಿಗೆ ಲಭಿಸುತ್ತಿಲ್ಲ. ಪ್ರತಿವರ್ಷ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗಾಗಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ, ವಾದ್ಯ ಕಲಾವಿದರು ಅರ್ಜಿ ಸಲ್ಲಿಸುತ್ತಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡದೆ ಕಡತಗಳನ್ನು ಮೂಲೆಗುಂಪು ಮಾಡುತ್ತಿದೆ. ಹಿರಿಯ ಕಲಾವಿದರ ಸೇವಾ ಅವಧಿ ಮುಗಿಯುತ್ತಿರುವುದರಿಂದ ತಕ್ಷಣವೇ ಅವರಿಗೆ ಸೂಕ್ತ ಮನ್ನಣೆ ದೊರೆಯಬೇಕು. ಯುವ ಕಲಾವಿದರಿಗೆ ಭವಿಷ್ಯದಲ್ಲಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ಅನುಷ್ಠಾನಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ಸಂಘದ ಸದಸ್ಯರಿಗೆ ಗುರುತಿನ ಚೀಟಿ ಹಾಗೂ ಶ್ವೇತಾ ಜೈನ್ ಕೊಡಮಾಡಿದ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಅನಾರೋಗ್ಯಪೀಡಿತ ಸದಸ್ಯರಿಗೆ ಧನಸಹಾಯ ನೀಡಲಾಯಿತು.

ಸಂಘದ ಅಧ್ಯಕ್ಷ ಶೀನ ಪೂಜಾರಿ ಕಲ್ಲಮುಂಡ್ಕೂರು, ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್, ಕಾರ್ಯದರ್ಶಿ ಹರಿಶ್ಚಂದ್ರ ಪೆರಾರ, ಉಪಾಧ್ಯಕ್ಷ ಕೇಶವ ಶೇರಿಗಾರ್, ಜೊತೆ ಕೋಶಾಧಿಕಾರಿ ನಾಗೇಶ್ ಪೂಜಾರಿ ಬ್ರಹ್ಮರಕೂಟ್ಲು, ಜೊತೆ ಕಾರ್ಯದರ್ಶಿ ಮಾಧವ ದೇವಾಡಿಗ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸುಧೀಶ್ ಕಾರ್ಯಕ್ರಮ ನಿರೂಪಿಸಿದರು.

Related posts

ಜುಲೈ 12: ಪಡುಕೋಣಾಜೆಯಲ್ಲಿ ಕೆಸರ್ ಡೊಂಜಿ ದಿನ

Madhyama Bimba

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಉಪವಿಭಾಗದಲ್ಲಿ ಕತ೯ವ್ಯ ನಿವ೯ಹಿಸಿ ವಯೋ ನಿವೃತ್ತಿ, ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಬೀಳ್ಕೊಡುಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More