ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು ಪ್ರೌಢಶಾಲಾ ವಿಭಾಗ
ನೂತನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯ ಸಭೆ ನಡೆಸಲಾಯಿತು.
ನೂತನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಕೆರ್ವಾಶೆ. ಕಾರ್ಯದರ್ಶಿಯಾಗಿ ಶೀತಲ್ ಕುಮಾರ್ ಜೈನ್ ನ್ಯಾಯವಾದಿಗಳು ಹಾಗೂ ಕೋಶಾಧಿಕಾರಿಯಾಗಿ ರಮಾನಂದ ಪೂಜಾರಿ ಶಿರ್ಲಾಲು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಿಕಟ ಪೂರ್ವ ಅಧ್ಯಕ್ಷರಾದ ಶೀತಲ್ ಜೈನ್ ರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಯಿತು. ಇವರ ಜೊತೆ ಸುದೀಪ್ ಹೆಗ್ಡೆ ಶಿರ್ಲಾಲು, ರವೀಂದ್ರ ಎಸ್ ಪೂಜಾರಿ ಶಿರ್ಲಾಲು, ಶಶಿಕಾಂತ್ ಪ್ರಭು ಶಿರ್ಲಾಲು, ಅಭಿನಂದನ್ ಜೈನ್ ಜಾರ್ಕಳ ಮುಂಡ್ಲಿ, ಸುರೇಖಾ ಶೆಟ್ಟಿ, ಶಿರ್ಲಾಲು, ಮಹೇಶ್ ಜಿ ಶೆಟ್ಟಿ ಶಿರ್ಲಾಲು, ಅಕ್ಷಯ ಜೈನ್ ಕೆರ್ವಾಶೆ, ದಿನೇಶ್ ಆಚಾರ್ಯ ಅಂಡಾರು ಉಪಾಧ್ಯಕ್ಷರುಗಳಾಗಿ ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ನಿತಿನ್ ಶಿರ್ಲಾಲು ಹಾಗೂ ಪೂಜಾ ಕೆರ್ವಾಶೆ, ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ಚರಿತ್ರೆ ಹಾಗೂ ವಿದ್ಯಾಶ್ರೀ ಕೆರ್ವಾಶೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಣ್ ಭಂಡಾರಿ ಶಿರ್ಲಾಲು ಹಾಗೂ ರಂಜಿತ್ ಪೂಜಾರಿ ಶಿರ್ಲಾಲು ಇವರು ಆಯ್ಕೆಯಾದರು.
