ಕಾರ್ಕಳ

ಜ್ಞಾನಸುಧಾ: ಮೌಲ್ಯಸುಧಾ-51

ಗಣಿತನಗರ: ಸಿಕ್ಕಿದ ಅವಕಾಶವನ್ನು ನೈಜರೂಪಕ್ಕೆ ತಂದು ಅದನ್ನು ಯಶಸ್ವಿ ಮಾಡಬೇಕು. ಇಲ್ಲಿ ನಮ್ಮಜಾಣ್ಮೆ, ನಿರಂತರ ಪ್ರಯತ್ನ ಮತ್ತು ಬುದ್ಧಿವಂತಿಕೆ ಮುಖ್ಯ. ವ್ಯಕ್ತಿ ಬಿದ್ದಾಗ ಸೋಲಲ್ಲ. ಮತ್ತೊಮ್ಮೆ ಪುಟಿದೇಳಲು ಮರೆತಾಗ ಸೋಲೋದು. ಸೋಲು, ಹಿನ್ನಡೆಗಳು ಬದುಕಿನ ಒಂದು ಭಾಗ. ಬದುಕು ಬಹಳ ಮುಂದಿದೆ ಹತಾಶರಾಗ ಬಾರದು. ಜೀವನದಲ್ಲಿ ಗ್ಯಾರಂಟಿ ಮತ್ತು ವ್ಯಾರಂಟಿ ಇರುವುದಿಲ್ಲ. ಇಲ್ಲೇನದರೂ ಎರಡು ವಿಚಾರಗಳು ಇದ್ದರೇ ಸಾಧ್ಯತೆಗಳು ಮತ್ತು ಅವಕಾಶಗಳು ಮಾತ್ರ ಎಂದು ರೋ| ಪಿ.ಎಚ್.ಎಫ್ ಅಭಿನಂದನ್ ಶೆಟ್ಟಿ ನುಡಿದರು.


ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-51ರಲ್ಲಿ ಭವಿಷ್ಯದ ನಿರೀಕ್ಷೆ ಮತ್ತು ಸವಾಲುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿಗಳಾದಂತಹ ಅನಿಲ್ ಕುಮಾರ್‌ಜೈನ್, ಉಪಪ್ರಾಂಶುಪಾಲರಾದ ಸಾಹಿತ್ಯ, ಪಿ.ಆರ್.ಒಜ್ಯೋತಿ ಪದ್ಮನಾಭ ಭಂಡಿ, ಸಂಸ್ಥೆಯ ಹಿತೈಷಿ ರೋ|ಉಪೇಂದ್ರ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಶಾಂಕ್ ಗೌಡರ್ ಪ್ರಾರ್ಥಿಸಿ, ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

Madhyama Bimba

ಪರಶುರಾಮ ಥೀಮ್ ಪಾರ್ಕ್- ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

Madhyama Bimba

ಅಮೃತ ಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More