ಕಾರ್ಕಳ: ಉಭಯ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ 1180 ಕೋಟಿ ರೂ. ಮೀರಿ ವ್ಯವಹಾರ ನಡೆಸಿ, 5.04 ಕೋ. ರೂ. ಲಾಭ ಗಳಿಸಿದ್ದು , ಶೇ 18 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ರವರು ತಿಳಿಸಿದರು.
ಸೆ. 06 ರಂದು ಸೊಸೈಟಿಯ ನೂತನ ವಾಣಿಜ್ಯ ಸಂಕೀರ್ಣ ಸಹಕಾರ ಸಿಂದೂರದ ಸಭಾಭವನದಲ್ಲಿ ಜರುಗಿದ 30ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025-26 ರ ಸಾಲಿನ ವ್ಯವಹಾರದ ಪ್ರಗತಿಯ ಅಂಕಿ ಅಂಶವನ್ನು ನೀಡಿದ ಅವರು ರೂ. 4.78 ಕೋಟಿ ಪಾಲು ಬಂಡವಾಳ, ರೂ 29.86 ಕೋಟಿ ಸ್ವಂತ ನಿಧಿ, ರೂ 254.50 ಕೋಟಿ ಠೇವಣಿ, ಹಾಗೂ ರೂ 211.98 ಹೊರ ಬಾಕಿ ಸಾಲ ಹೊಂದಿ -ಸರ್ವಾಂಗೀಣ ಅಭಿವೃದ್ಧಿ ಸಾಧಿಸಿರುವುದು ಗ್ರಾಹಕರು ಸಹಕಾರಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ತ್ರಿಂಶತಿಯ ಸಂಭ್ರಮದ ಸವಿ ನೆನಪಲ್ಲಿ ನಿರ್ಮಾಣ ಗೊಂಡ ನೂತನ ವಾಣಿಜ್ಯ ಸಂಕೀರ್ಣ ಸಹಕಾರ ಸಿಂದೂರದಲ್ಲಿ ವಿವಿಧ ಪ್ರತಿಷ್ಠಿತ ಉದ್ಯಮಗಳು ಕಾರ್ಯಾಚರಿಸುತ್ತಿದ್ದು ಜೋಡುರಸ್ತೆ ಪೇಟೆಯು ಸದಾ ಜನ ರಿಂದ ತುಂಬಿರುತಿದ್ದು ಇದರಿಂದ ಕಾರ್ಕಳದ ಪೇಟೆಯು ಜೋಡುರಸ್ತೆಯಾ ತನಕ ವಿಸ್ತರಿಸಿದಂತೆ ಭಾಸವಾಗುತ್ತಿದೆ ಮಾತ್ರವಲ್ಲದೆ ಜೋಡುರಸ್ತೆಯ ಇತರ ವ್ಯಾಪಾರ ಉದ್ಯಮಗಳು ಬೆಳೆಯುತ್ತಿದ್ದು ಈ ಭಾಗದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಹಾಗೂ ಇಲ್ಲಿನ ಇತರ ವ್ಯಾಪಾರ, ಉದ್ಯಮಗಳಿಗೂ ಪರೋಕ್ಷ ವಾಗಿ ಲಾಭವಾಗುತ್ತಿದೆ. ಜೊತೆಗೆ ಈ ಸಂದರ್ಭದಲ್ಲಿ ಸಂಸ್ಥೆಯ ತ್ರಿಂಶತಿ ಸಂಭ್ರಮ ಸಮಾರಂಭವು ಯಶಸ್ವಿ ಯಾಗಲು ಸಹಕರಿಸಿದ ಎಲ್ಲ ಗ್ರಾಹಕ ಮಿತ್ರರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ 4 ಮಂದಿ ವಿದ್ಯಾರ್ಥಿ ಗಳಾದ ಎಂ. ಎಸ್ಸಿ (ಕೃಷಿ) ಕೀಟ ಶಾಸ್ತ್ರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕ ಪಡೆದ ಅಭಿಜ್ಞಾ ನಾಯಕ್ ಮುದರಂಗಡಿ, ಮಾಸ್ಟರ್ ಆಫ್ ಫಿಸಿಯೋಥೆರಫಿಯಲ್ಲಿ 2ನೇ ರ್‍ಯಾಂಕ್ ಪಡೆದ ಅಜಿತ ಎಳ್ಳಾರೆ, ಮಾಸ್ಟರ್ ಆಫ್ ಡೆಂಟಲ್ ಸರ್ಜರಿಯಲ್ಲಿ 7 ನೇ ರ್‍ಯಾಂಕ್ ಪಡೆದ ರಕ್ಷಾ ಕುಮಾರಿ ಕಡ್ತಲ, ಹಾಗೂ ಎಂ ಫಾರ್ಮದಲ್ಲಿ 9ನೇ ರ್‍ಯಾಂಕ್ ಪಡೆದ ಸುಷ್ಮಾ ಜಿ ನಾಯಕ್ ಪೆಲತ್ತೂರು ಇವರನ್ನು ಅಭಿನಂದಿಸಿ ಗೌರವಿಸ ಲಾಯಿತು. ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಒಟ್ಟು 41 ಜನ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಸದಾನಂದ ಪಾಟ್ಕರ್ ಬಜಗೋಳಿ, ಸಚ್ಚಿದಾನಂದ ಪ್ರಭು ಕಣಂಜಾರು, ವಿಶ್ವನಾಥ ಪಾಟ್ಕರ್ ಬೆಳ್ಮಣ್ , ಸುನಿಲ್ ನಾಯಕ್ ಮಟ್ಟಾರು, ಇಂದುಮತಿ ಜಿ ಪ್ರಭು ಜೋಡುರಸ್ತೆ , ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ಕಲಾವತಿ ಯು ನಾಯಕ್ ಹಿರ್ಗಾನ, ರಂಜಿತ್ ಕುಮಾರ್ ಪೆರ್ಡೂರು, ದಿನೇಶ್ ನಾಯಕ್ ಹೆರ್ಮುಂಡೆ, ಹರೀಶ್ ಬಿ ನಾಯಕ್ ಪಳ್ಳಿ, ದೇವೇಂದ್ರ ಕಾಮತ್ ಎಳ್ಳಾರೆ, ರಮನಾಥ ನಾಯಕ್ ಕುಕ್ಕುಂದೂರು, ಹರೀಶ್ ನಾಯಕ್ ಅಜೆಕಾರು ಉಪಸ್ಥಿತರಿದ್ದರು.
ಸೊಸೈಟಿಯ ಉಪಾಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಂದ್ರ ನಾಯಕ್ 2025-26 ನೇ ಸಾಲಿನ ವಾರ್ಷಿಕ ವರದಿ, ಆರ್ಥಿಕ ತಃಖ್ತೆ ಹಾಗು 2026-27ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. 2025-26 ನೇ ಸಾಲಿನಲ್ಲಿ ಬಜೆಟ್ ಗಿಂತ ಹೆಚ್ಚಿಗೆ ಖರ್ಚಾದ ವಿವರಗಳನ್ನು ಮಂಡಿಸಿ , ಅನುಮೋದನೆ ಪಡೆಯ ಲಾಯಿತು. ಹಿರಿಯ ವ್ಯವಸ್ಥಾಪಕರಾದ ಉದಯ ಪ್ರಭು ಧನ್ಯವಾದ ಸಲ್ಲಿಸಿದರು.
