Blog

ಆಶ್ರಯ ಮನೆ ವಿತರಣೆ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ನಗರ ಕಾಂಗ್ರೆಸ್ ಸಮಿತಿ ಕಾರ್ಕಳ ಆಶ್ರಯದಲ್ಲಿ ಸರ್ವರಿಗೂ ಸೂರು ಯೋಜನೆಯಾದ‌ ಕರ್ನಾಟಕ ಸರಕಾರದ ಕೊಳಗೇರಿ ಅಭಿವೃದ್ಧಿ ಮಂಡಲಿ ಬೆಂಗಳೂರು ಇದರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಪತ್ತೊಂಜಿಕಟ್ಟೆಯಲ್ಲಿ ಗುಂಪು ಮನೆ ಮಾದರಿಯಲ್ಲಿ 250 ಮನೆಗಳು ನಿರ್ಮಾಣವಾಗುತ್ತಿದ್ದೆ ಆದರೆ ಅರ್ಹ ಫಲಾನುಭವಿಗಳನ್ನು ಅಯ್ಕೆ ಮಾಡುವಲ್ಲಿ ಶಾಸಕ ಸುನೀಲ್ ಕುಮಾರ್ ವಿಳಂಬ ವಹಿಸುತ್ತಿದ್ದು ಶೀಘ್ರ ಫಲಾನುಭವಿಗಳ ಅಯ್ಕೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿಯನ್ನು ಹಮ್ಮಿಕೊಂಡಿದೆ.

ಶಾಸಕರು ಈವರೆಗೆ ಕೇವಲ ಒಂದು ಭಾರಿ ಕಾಟಾಚಾರಕ್ಕೆ ಆಶ್ರಯ ಸಮಿತಿ ಸಭೆಯನ್ನು ನಡೆಸಿರುತ್ತಾರೆ. ಈಗಾಲೇ ನೂರಾರು ಬಡ ಅರ್ಜಿದಾರರು ಮುಂಗಡ ಹಣವನ್ನು ಪಾವತಿಸಿದ್ದು ಅವರ ಸ್ವಂತ ಮನೆಯ ಕನಸು ಕನಸಾಗಿಯೇ ಉಳಿದಿದೆ. ರಾಜ್ಯ ಸರಕಾರದ ಹೊಸ ನಿಯಮದಂತೆ ಕೇವಲ ಒಂದು ಲಕ್ಷ ರೂಪಾಯಿ‌ ಮೊತ್ತಕ್ಕೆ ಮನೆ ಸಿಗುತ್ತಿದ್ದು ಕೇವಲ 10 ಸಾವಿರ ರೂಪಾಯಿ ಮುಂಗಡ ಪಾವತಿಗೆ ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಫಲಾನುಭವಿಗಳ ಆಯ್ಕೆ ಪೂರ್ಣವಾಗದೆ ಉಳಿದ ಹಣ ಪಾವತಿಸಲು ಸಾದ್ಯವಾಗದೆ ಪೂರ್ಣ ಮನೆ ನಿರ್ಮಾಣ ಪ್ರಕ್ರಿಯೆ ನಿಂತು ಹೋಗಿದೆ.

ಹಾಗಾಗಿ ಫಲಾನುಭವಿಗಳ‌ ಆಯ್ಕೆಯಲ್ಲಿ ಶಾಸಕರ ನಿರ್ಲಕ್ಷವನ್ನು ಖಂಡಿಸಿ ಶೀಘ್ರ ಫಲಾನುಭವಿಗಳ ಅಯ್ಕೆಯನ್ನು ಅಂತಿಮಗೊಳಿಸುವಂತೆ ಆಗ್ರಹಿಸಿ ದಿನಾಂಕ 12 ಶನಿವಾರ ಬೆಳಿಗ್ಗೆ 9:30 ರಿಂದ ಪತ್ತೊಂಜಿಕಟ್ಟೆಯ ಗುಂಪು ಮನೆ ನಿವೇಶನದ ಸ್ಥಳದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಕಾಂಗ್ರೆಸ್ ‌ಕಚೇರಿಯಲ್ಲಿ ಸತ್ಯಾಗ್ರಹದ ಪೋಸ್ಟರನ್ನು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಬಿಡುಗಡೆಗೊಳಿಸಿ ಮಾತನಾಡಿ ಬಡ ಜನರ ಸ್ವಂತ ಸೂರಿನ‌ ಕನಸು‌ ನನಸಾಗಿಸುವುದು ನಮ್ಮ ಬದ್ದತೆಯಾಗಿದೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಇಲಾಖಾ ಸಚಿವರ ‌ಗಮನಕ್ಕೆ ತರಲಾಗುವುದು ಮತ್ತು ಶಾಸಕರ ವಿಳಂಬ ನೀತಿಯನ್ನು ಬಲವಾಗಿ ಖಂಡಿಸಲಾಗುವುದು ಎಂದರು.

ಈ ಸಂದರ್ಬದಲ್ಲಿ ಬ್ಲಾಕ್ ಅಧ್ಯಕ್ಷರಾದ ಶುಭದರಾವ್,‌ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಮಹಿಳಾ ಅಧ್ಯಕ್ಷೆ ರೀನಾ‌ ಜೂಲಿಯೆಟ್ ಡಿ’ ಸೋಜಾ, ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್, ಸದಸ್ಯರುಗಳಾದ ಆಶ್ಫಕ್ ಆಹ್ಮದ್, ವಿನ್ನಿಬೋಲ್ಡ್, ನಳಿನಿ ಆಚಾರ್ಯ, ಪ್ರಭಾ ಕಿಶೋರ್, ಹರೀಶ್ ದೇವಾಡಿಗ, ಪ್ರವೀಣ್ ಶೆಟ್ಟಿ, ವಿವೇಕ್ ಶೆಣೈ, ಪ್ರಸನ್ನ ಶೆಟ್ಟಿಗಾರ್, ನಗರ ಆಶ್ರಯ‌ ಸಮಿತಿ ಸದಸ್ಯೆ ಚಂಪಾ‌ ಸುನೀಲ್, ಅಕ್ರಮ‌ ಸಕ್ರಮ‌ ಸಮಿತಿ ಸದಸ್ಯ ನವೀನ್ ದೇವಾಡಿಗ, ಬ್ಲಾಕ್ ಉಪಾದ್ಯಕ್ಷ ಪ್ರಭಾಕರ್ ಬಂಗೇರ, ಮಾಜಿ ಸದಸ್ಯೆ ಅನಿಸಾ ಖಾತುನ್, ಕಾಂತಿ ಶೆಟ್ಟಿ, ಮುರಳಿ ರಾಣೆ ಮಾರ್ಕೆಟ್, ಬೂತ್ ಅಧ್ಯಕ್ಷರು, ಬಿಎಲ್ಎ2, ಮೊದಲಾದವರು ಉಪಸ್ಥಿತರಿದ್ದರು.

Related posts

ತುಳು ಅಭಿವೃದ್ಧಿ ನಿಗಮ ಹಾಗೂ ತುಳು ಭವನ ನಿರ್ಮಾಣ ಮಾಡಿ – ಉದಯ ಶೆಟ್ಟಿ

Madhyama Bimba

ಟೇಕ್ವಂಡೋ – ಪ್ರೀತಮ್ ದೇವಾಡಿಗ ದ್ವಿತೀಯ

Madhyama Bimba

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More