ಕಾರ್ಕಳಹೆಬ್ರಿ

ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘದ ಮಹಾಸಭೆ

ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘ ನಿಯಮಿತ(ಲ್ಯಾಂಪ್ಸ್)ಕಾರ್ಕಳ ಇದರ 2025-26ನೇ ಸಾಲಿನ ಸರ್ವಸದಸ್ಯರ ಸಭೆಯು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘವು ಪ್ರಗತಿ ಪಥದಲ್ಲಿ ಮುಂದುವರಿಯುತ್ತಿದ್ದು 2026ರ ಅಂತ್ಯಕ್ಕೆ ರೂ. 60.55 ಕೋಟಿ ಠೇವಣಿ ಹಾಗೂ ರೂ.48.60 ಕೋಟಿ ಹೊರಬಾಕಿ ಸಾಲ ಇರುತ್ತದೆ. ಸಂಘವು ಸದಸ್ಯರಿಗೆ ಶೇ.15% ಡಿವಿಡೆಂಡನ್ನು ಘೋಷಣೆ ಮಾಡಿದ್ದು ವರದಿ ವರ್ಷದಲ್ಲಿ ರೂ.57.74 ಲಕ್ಷ ಲಾಭಗಳಿಸಿರುತ್ತದೆ.

ಸಂಘದ ಉಪಾಧ್ಯಕ್ಷರಾದ ಬಾಲಗಂಗಾಧರ ಬಿ ಗೌಡ ನಿರ್ದೇಶಕರಾದ ರಾಘವ ನಾಯ್ಕ್, ರಮೇಶ್ ನಾಯ್ಕ್, ಬಾಬು ನಾಯ್ಕ್, ಶ್ರೀಮತಿ ವೀಣಾ ನಾಯ್ಕ್, ಸುರೇಶ್ ನಾಯ್ಕ್, ಸುರೇಶ ಗೌಡ, ಉದಯ ಕುಮಾರ್ ಹಾಗೂ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಪ್ರಮೀಳ ನಾಯ್ಕ್ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕರಾದ ಚಂದ್ರಶೇಖರ ನಾಯ್ಕಸ್ವಾಗತಿಸಿ, ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ. ದಿವಾಕರ ಶೆಟ್ಟಿ ವರದಿ ವಾಚಿಸಿ, ಧನ್ಯವಾದವಿತ್ತರು.

Related posts

“ಕರ್ನಾಟಕ ಸರಕಾರದ ಅವೈಜ್ಞಾನಿಕ ಮತ್ತು ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ನೀತಿಯಿಂದಾಗಿ ಕಾರ್ಕಳ ನಗರ ದುರ್ನಾತದತ್ತ’: ರವೀಂದ್ರ ಮೊಯ್ಲಿ

Madhyama Bimba

ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸಂಘ ಕೆರ್ವಾಶೆ ವತಿಯಿಂದ ಗಿಡ ನೆಡುವ ಹಾಗೂ ಸ್ವಚ್ಛತಾ  ಕಾರ್ಯಕ್ರಮ

Madhyama Bimba

ಯುವವಾಹಿನಿ ಕಾರ್ಕಳ ಘಟಕದ ವತಿಯಿಂದ ಛತ್ರಿ ಹಾಗೂ ರೇನ್‌ಕೋಟ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More