ಅಂತರ್ ರಾಷ್ಟೀಯ ಮಟ್ಟದ ಏಷ್ಯಾ ಯೋಗ ಚಾಂಪಿಯನ್ ಶಿಪ್ ನಲ್ಲಿ ಕೆರ್ವಾಶೆಯ ನಿಖಿಲ್ ವಿಜಯಿಯಾಗಿದ್ದಾರೆ.
ವಿಜಯ ಗಳಿಸಿದ ಬಳಿಕ ಕಾರ್ಕಳಕ್ಕೆ ಬಂದ ಅವರನ್ನು ಬಜಗೋಳಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಕೆರ್ವಾಷೆಯ ಹಲವಾರು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
- 🌹ಪರಿಚಯ🌹
ಉಡುಪಿ ಜಿಲ್ಲೆಯ ಕಾರ್ಕಳದ ಕೆರ್ವಾಶೆಯ ಪ್ರತಿಭಾವಂತ ಯುವಕ *ನಿಖಿಲ್ ಎ. ಪೂಜಾರಿ.*
2006ರ ಡಿಸೆಂಬರ್ 3ರಂದು ಜನಿಸಿದ ನಿಖಿಲ್, ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ಪೂಜಾರಿ ದಂಪತಿಯ ಪುತ್ರ. ಅಜಯ್ ಎ. ಪೂಜಾರಿ ಹಾಗೂ ಕುಮಾರಿ ದಿವ್ಯಾ ಅವರ ತಮ್ಮ.
ಬಾಲ್ಯದಿಂದಲೇ ಯೋಗಾಸನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ನಿಖಿಲ್, ನಿರಂತರ ಅಭ್ಯಾಸ ಮತ್ತು ಪರಿಶ್ರಮದ ಮೂಲಕ ಇಂದು ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ, ಅಲ್ಲಿಂದ ಏಷ್ಯಾ ಮಟ್ಟಕ್ಕೆ ತಲುಪಿದ್ದಾರೆ.
ನಿಖಿಲ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆರ್ವಾಶೆ ಮೈನ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಮಿಯಾರಿನ ಮೊರಾರ್ಜಿ ದೇಸಾಯಿ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರಸ್ತುತ ಮಂಗಳೂರಿನ ವಾಮಂಜೂರಿನ ಎಸ್.ಟಿ. ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಂದುವರಿಸುತ್ತಿದ್ದಾರೆ.
ಓದಿನ ಜೊತೆಗೆ ಯೋಗಾಸನದ ಅಭ್ಯಾಸವನ್ನೂ ಮುಂದುವರಿಸಿದ ನಿಖಿಲ್ ಅವರಿಗೆ ಮಿಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಜಗದೀಶ್ ಎಚ್. ಹಾಗೂ ಕಾರ್ಕಳದ ದೈಹಿಕ ಶಿಕ್ಷಕರಾದ ನರೇಂದ್ರ ಕಾಮತ್ ಅವರ ಮಾರ್ಗದರ್ಶನ ದೊರೆಯಿತು.ಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪಿಇಡಿ ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಎಂ. ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮೂಡಿಬಂದಿದೆ.
ಈಗಾಗಲೇ ಮೂರು ಬಾರಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ನಿಖಿಲ್, 2026ರಲ್ಲಿ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯ Artistic Solo ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು.
ರಾಷ್ಟ್ರಮಟ್ಟದ ಈ ಸಾಧನೆಯ ನಂತರ ನಿಖಿಲ್ ಅವರಿಗೆ ಥೈಲ್ಯಾಂಡ್‌ನಲ್ಲಿ ನಡೆದ ಏಷ್ಯಾ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗುವ ಅವಕಾಶ ದೊರೆಯಿತು.
ಇನ್ನು ಥೈಲ್ಯಾಂಡ್‌ನಲ್ಲಿ ನಡೆದ World Fitness Federation of Yogasana Sports International — *WFFYSI ಏಷ್ಯಾ ಯೋಗ ಚಾಂಪಿಯನ್‌ಶಿಪ್‌ನಲ್ಲಿ ನಿಖಿಲ್ ಅವರು Senior A ವಿಭಾಗದಲ್ಲಿ* ಭಾರತವನ್ನು ಪ್ರತಿನಿಧಿಸಿದರು.
*ಅಲ್ಲಿ ಅವರು Artistic Solo ಹಾಗೂ ಸಾಂಪ್ರದಾಯಕ ಯೋಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡರು.*
ರಾಜ್ಯಮಟ್ಟದ ಸ್ಪರ್ಧೆಗಳಿಂದ ಆರಂಭವಾದ ನಿಖಿಲ್ ಅವರ ಪಯಣ, ರಾಷ್ಟ್ರಮಟ್ಟದ ಗೆಲುವಿನ ಮೂಲಕ ಏಷ್ಯಾ ವೇದಿಕೆಗೆ ತಲುಪಿ, ಇದೀಗ ಥೈಲ್ಯಾಂಡ್‌ನಲ್ಲಿ ಭಾರತದ ಪರವಾಗಿ ಪ್ರಥಮ ಸ್ಥಾನ ಪಡೆಯುವವರೆಗೆ ಬಂದಿದೆ.
ನಿಖಿಲ್ ಅವರ ಈ ಸಾಧನೆಯ ಹಿಂದೆ ಅವರ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ಯೋಗಾಸನದ ಮೇಲಿನ ಆಸಕ್ತಿ ಪ್ರಮುಖ ಕಾರಣವಾಗಿದೆ. ಅವರ ಸಾಧನೆಯಿಂದ ಕೆರ್ವಾಶೆ ಗ್ರಾಮದ ಕೀರ್ತಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದೆ.
