Blog

ನಿಟ್ಟೆಯಲ್ಲಿ ಪೊಲೀಸ್ ದಾಳಿ

ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೋಟೆಲ್‌ ಸನ್ಮಾನ್ ರೆಸಿಡೆಸ್ಸಿಯಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ಆಡುತ್ತೀರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದು, ಈ ವೇಳೆ ಜುಗಾರಿ ಆಡುತ್ತಿದ್ದ ಸುಜೀತ್, ಅಭಿಮನ್ಯು, ಮಹೇಶ, ಧೀರಜ್‌, ನರೇಶ್‌ ಕುಮಾರ್, ಪ್ರಶಾಂತ, ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಇತರೆ ನಾಲ್ಕು ಜನರಾದ ಯಶೋದರ (ಅಣ್ಣು), ನೂರು ಮಹಮ್ಮದ್‌, ರವಿಶೆಟ್ಟಿ, ಸತೀಶ್‌ ರವರು ತಪ್ಪಿಸಿಕೊಂಡಿರುತ್ತಾರೆ. ದಾಳಿಯ ವೇಳೆ ಜುಗಾರಿ ಬಳಸಿದ ರೂ 16,350/- ನಗದು, ಇಸ್ಪೀಟ್ ಎಲೆಗಳು, ಹಾಗೂ ವಶಪಡಿಸಿಕೊಂಡ 7- ಮೋಬೈಲ್‌ಗಳ ಒಟ್ಟು ಅಂದಾಜು ಮೊತ್ತ 17,000, ಖುರ್ಚಿ ಮತ್ತು ಪೀಟೋಪಾಕರಣಗಳ ಅಂದಾಜು ಮೌಲ್ಯ ಒಟ್ಟು 10.500 ರೂಪಾಯಿಗಳು ಆಗಿರುತ್ತದೆ, ಈ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 62/2026 ಕಲಂ: 79. 80 ಕೆ ಪಿ ಆಕ್ಟ್, ಮತ್ತು ಕಲಂ: 112(1), ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾಗಿರುತ್ತದೆ. ತಲೆಮರಿಸಿಕೊಂಡಿದ್ದ ಆರೋಪಿಗಳು ಮತ್ತು ಜುಗಾರಿ ಆಡುವ ಅವಕಾಶ ಮಾಡಿಕೊಟ್ಟ ನಿಟ್ಟೆ ಗ್ರಾಮದ ಹೋಟೆಲ್‌ ಸನ್ಮಾನ್ ರೆಸಿಡೆಸ್ಸಿಯ ಮಾಲೀಕರಿಗಾಗಿ ಹುಡುಕಾಟ ಮುಂದುವರೆದಿರುತ್ತದೆ.

Related posts

ಜಿಲ್ಲೆಯ 272477 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

Madhyama Bimba

ಜೂ. 28: ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಕಜ್ಕೇ ಮಂಜುನಾಥ್ ಕಾಮತ್ ಹಾಗೂ ಗುಂಡಾಳ ಸದಾಶಿವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More