ಕಾರ್ಕಳಹೆಬ್ರಿ

ಕಾರ್ಕಳ ಕಾಂಗ್ರೆಸ್ಸಿಗರೇ ರಾಜಕೀಯ ಬೀದಿ ನಾಟಕ ನಿಲ್ಲಿಸಿ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿ- ರವೀಂದ್ರ ಮೊಯ್ಲಿ

ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಜನರಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೇಸ್ ಪಕ್ಷ ಮತ್ತು ಅದರ ನಾಯಕರುಗಳು ತಮ್ಮ ಅಸ್ತಿತ್ವಕ್ಕಾಗಿ ಜನಪರ ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ ಪ್ರಹಸನದಲ್ಲಿ ತೊಡಗಿದ್ದು, ಈಗಾಗಲೇ ಪೋಸ್ಟರ್ ಅಭಿಯಾನ ಮಾಡಲು ಹೋಗಿ ಜನ ಸಾಮಾನ್ಯರಿಂದ ಉಗಿಸಿಕೊಂಡು ಅವಮಾನಕ್ಕೀಡಾಗಿದ್ದು, ಈಗ ಮತ್ತೆ ಆಶ್ರಯ ಮನೆ ವಿತರಣೆ ಬಗ್ಗೆ ತಮ್ಮ ರಾಜಕೀಯದ ಬೀದಿ ನಾಟಕ ಆರಂಭಿಸಿರುತ್ತಾರೆ.

ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಅವಾಸ್ ಯೋಜನೆ (ನಗರ) ಸರ್ವರಿಗೂ ಸೂರು ಅಭಿಯಾನದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು ಇದರ ಮುಖೇನ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಇದಾಗಿದ್ದು, ಈ ಯೋಜನೆಯನ್ವಯ ಕೇಂದ್ರ ಸರಕಾರ, ರಾಜ್ಯ ಸರಕಾರ ಅನುದಾನ ನೀಡುತ್ತಿದ್ದು, ಫಲಾನುಭವಿಗಳ ವಂತಿಗೆ ಕೂಡ ಸೇರಿಸಿ ಮನೆ ನಿರ್ಮಾಣವಾಗಲಿದೆ.

ಅಂತೆಯೇ ರಾಜ್ಯ ಸರಕಾರ ಪ್ರತೀ ಫಲಾನುಭವಿಯಿಂದ ರೂಪಾಯಿ1 ಲಕ್ಷ ಸಂಗ್ರಹಿಸಲು ಆದೇಶ ನೀಡಿರುತ್ತದೆ. ಈ ಯೋಜನೆಯಡಿಯಲ್ಲಿ ಕಾರ್ಕಳ ಪತ್ತೊಂಜಿಕಟ್ಟೆಯ ಗುಂಡ್ಯ ಪ್ರದೇಶದಲ್ಲಿ ಸುಮಾರು 250 ಮನೆಗಳಿರುವ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸುಮಾರು 95% ಕಾಮಗಾರಿ ಮುಗಿದಿದ್ದು, ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಯೋಜನೆಯ ಫಲಾನುಭವಿಯಾಗಲು ಕೆಲವೊಂದು ಮಾನದಂಡಗಳಿದ್ದು, ಮುಖ್ಯವಾಗಿ ಆತ ಯಾವುದೇ ಸ್ಥಿರಾಸ್ತಿ/ ವಸತಿ ಹೊಂದಿರಬಾರದು, ಆತ ಬಿ.ಪಿ.ಎಲ್ ಕಾರ್ಡುದಾರನಾಗಿರಬೇಕು ಹಾಗೂ ಪುರಸಭಾ ವ್ಯಾಪ್ತಿಯ ನಿವಾಸಿಯಾಗಿರಬೇಕು. ಮೊದಲ ಹಂತದಲ್ಲಿ ಈಗಾಗಲೇ  150 ಅರ್ಜಿ ಪುರಸಭೆಗೆ ಬಂದಿದ್ದು, ಅದರ ಪರಿಶೀಲನೆಗಾಗಿ ಕಂದಾಯ ಇಲಾಖೆಗೆ ನೀಡಿದ್ದು, ಅವುಗಳಲ್ಲಿ 98 ಅರ್ಜಿ ಮಾನ್ಯತೆ ಪಡೆದಿದೆ, ಎರಡನೇ ಹಂತದಲ್ಲಿ 113 ಅರ್ಜಿಗಳು ಬಂದಿದ್ದು, ಅದನ್ನು ಕೂಡ ಕಂದಾಯ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಕಂದಾಯ ಇಲಾಖೆಯ ಪರಿಶೀಲನೆಯ ಬಳಿಕ ಮುಂದಿನ ಪ್ರಕ್ರಿಯೇ ನಡೆಯಲಿದೆ. ಶಾಸಕ ಸುನೀಲ್ ಕುಮಾರ್‌ರವರು ದಿನಾಂಕ 14.07.2026 ರಂದು ಈ ಬಗ್ಗೆ ಕಂದಾಯ ಅಧಿಕಾರಿಗಳ ಸಭೆ ಕರೆದು ಆದಷ್ಟು ಬೇಗ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿಸುವಂತೆ ಸೂಚಿಸಿರುತ್ತಾರೆ. ಪ್ರಸ್ತುತ ಅಧಿಕಾರಿಗಳಿ ಎಸ್.ಐ.ಆರ್ ಕಾರ್ಯದಲ್ಲಿ ತೊಡಗಿದ್ದು, ಅದು ಮುಗಿದ ಕೂಡಲೇ ಫಲಾನುಭವಿಗಳ ಪಟ್ಟಿ ಅಂತಿಮವಾಗಲಿದೆ. ಕಾರ್ಕಳ ಶಾಸಕರು ಮೊದಲ ಹಂತದಲ್ಲಿ ಮಾನ್ಯತೆ ಪಡೆದಿರುವ 98 ಅರ್ಜಿಗಳ ಫಲಾನುಭವಿಗಳಿಗೆ ಮನೆ ವಿತರಿಸುವ ಕುರಿತು ಅಧಿಕಾರಿಗಳೊಂದಿಗೆ ಈಗಾಗಲೇ ಮುಂದಿನ ಎರಡು ಮೂರು ದಿನಗಳಲ್ಲಿ ಮೀಟಿಂಗ್‌ನ ದಿನಾಂಕ ನಿಗಧಿಯಾಗಿರುತ್ತದೆ. ಇದನ್ನು ಅರಿತ ಕಾಂಗ್ರೇಸಿಗರು ಈ ರೀತಿಯ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಶಾಸಕರ ಮೀಟಿಂಗ್ ದಿನಾಂಕ ನಿಗದಿಯಾದಾಗ ಕಾಂಗ್ರೇಸ್ ಮತ್ತು ಅವರ ನಾಯಕ ಉದಯ ಶೆಟ್ಟಿಯವರು ಒಮ್ಮೆಲೆ ನಿದ್ದೆಯಿಂದ ಎದ್ದಂತೆ ವರ್ತಿಸುವುದು ಇದೂ ಹೊಸತು ಏನಲ್ಲ.

ಶಾಸಕರು ತಮ್ಮ ಪ್ರಯತ್ನದಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳಿಗೆ ಅನುದಾನ ತರಿಸಿದರೇ ತಕ್ಷಣ ಆ ಪ್ರದೇಶಕ್ಕೆ ಸ್ಥಳ ಪರಿಶೀಲನೆ ಮಾಡುವುದು ಆ ಮುಖೇನ ರಾಜಕೀಯ ದುರ್ಲಾಭ ಪಡೆಯಲು ಕಾಂಗ್ರೇಸ್ ಪ್ರಯತ್ನ ಪಡೆಯುವುದು ಜನತೆಗೆ ಈಗಾಗಲೇ ತಿಳಿದಿರುತ್ತದೆ. ಫಲಾನುಭವಿಗಳಿಗೆ ಸೂರು ವಿತರಿಸುವ ಬಗ್ಗೆ ಮೀಟಿಂಗ್ ದಿನಾಂಕ ನಿಗಧಿಯಾದ ವಿಷಯ ತಿಳಿದು ಮತ್ತೊಮ್ಮೆ ಈ ರೀತಿಯ ಪ್ರಹಸನದಲ್ಲಿ ತೊಡಗಿಸಿರುವುದು ಕಾಂಗ್ರೆಸ್ಸಿಗರ ಭೌತಿಕ ದಿವಾಳಿತನವನ್ನು ತೋರಿಸುತ್ತದೆ. ಕಾರ್ಕಳದಲ್ಲಿ 2027 ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಿರುವುದನ್ನು ಗಮನಿಸಿ ಈ ರೀತಿಯ ಪ್ರಚಾರದ ಗಿಮಿಕ್ಕಿಗೆ ಕಾಂಗ್ರೇಸ್ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಕಳದ ಜನ ಪ್ರಭುದ್ದರಾಗಿದ್ದು, ನಿಮ್ಮ ರಾಜಕೀಯ ನಾಯಕರುಗಳಿಗೆ ಮರುಳಾಗುವವರಲ್ಲ. ಇನ್ನಾದರೂ ಈ ರೀತಿಯ ರಾಜಕೀಯ ಬೀದಿ ನಾಟಕ ಬಿಟ್ಟು ಕಾರ್ಕಳದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈ ಜೋಡಿಸಿ ಎಂದು ಕಾರ್ಕಳ ಬಿಜೆಪಿ ವಕ್ತಾರರಾದ ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ.- ಸ್ಥಾಪಕಾಧ್ಯಕ್ಷ ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ವಿತರಣೆ

Madhyama Bimba

ಬೆಳ್ಳಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Madhyama Bimba

ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ಹಾಗೂ ಅನುದಾನ ವಿತರಣಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More