ಕಾರ್ಕಳಹೆಬ್ರಿ

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ

ಹೆಬ್ರಿ: ನಮ್ಮ ಸಹಕಾರಿ ಸಂಘವು ಉತ್ತಮವಾಗಿ ಕೆಲಸ ಮಾಡುವುದರಿಂದ ‘ಎ’ ಗ್ರೇಡ್ ಮಾನ್ಯತೆ ಬಂದಿರುತ್ತದೆ. 58 ಲಕ್ಷ ಲಾಭಗಳಿಸಿರುವುದು ಉತ್ತಮ ಸಾಧನೆ. ರೈತರ ಹಿತಕ್ಕಾಗಿ ಸಾಲದ ವಿಭಾಗಗಳಲ್ಲಿ ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಹೆಚ್ಚು ಜನರು ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ತಿಳಿಸಿದರು.


ಹೈನುಗಾರಿಕೆ, ಬೆಳೆ ಸಾಲವನ್ನು ಹೆಚ್ಚಾಗಿ ನೀಡಿ ರೈತರ ಕಲ್ಯಾಣಕ್ಕೆ ಶ್ರಮವಹಿಸಿದ್ದೇವೆ. ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡಾಗ ಸಂಘದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.


ಬೇಳಂಜೆ ಕೊಪ್ಪರಗುಂಡಿ ಸಂಜೀವ ಶೆಟ್ಟಿ ಪ್ರಾಯೋಜನಕತ್ವದ ಉತ್ತಮ ಕೃಷಿಕ ದತ್ತಿನಿಧಿ ಪ್ರಶಸ್ತಿಯನ್ನು ಶ್ರೀಕಾಂತ್ ಯಲಕೋಡು ಶಿವಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸದಸ್ಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಹರೀಶ್ ಪೂಜಾರಿ ಬೆಳಂಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶೀನ ನಾಯ್ಕ್, ಸದಸ್ಯರಾದ ಪಾಂಡುರಂಗ ಪೂಜಾರಿ, ರಾಜೀವ ಶೆಟ್ಟಿ, ಭೋಜ ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ, ವಿಜೇಂದ್ರ ಶೆಟ್ಟಿ ಸಲಹೆ ಸೂಚನೆ ನೀಡಿದರು.

ದ.ಕ.ಜಿಲ್ಲಾ ಪ್ರತಿನಿಧಿ ಜಯಂತ್ ಕುಮಾರ್, ನಿರ್ದೇಶಕರಾದ ಬಿ. ಕರುಣಾಕರ ಶೆಟ್ಟಿ, ಪುಟ್ಟಣ್ಣ ಭಟ್, ದಯಾನಂದ ಶೆಟ್ಟಿ, ಅಮೃತ್ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ ಕಾನ್ಬೆಟ್ಟು, ರಾಘವೇಂದ್ರ ನಾಯ್ಕ್, ವೀಣಾ ಪ್ರಭು, ಕೆ. ದೇವು, ಸುಧಾ ಜಿ. ನಾಯಕ್, ಉಪಸ್ಥಿತರಿದ್ದರು.
ಸಿಇಓ ಶೀನ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Related posts

ಮನಿಯಾಲು ನಾಗೇಶ್ ನಾಯಕ್ ನಿಧನ

Madhyama Bimba

ಕಾಬೆಟ್ಟು ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Madhyama Bimba

ಕಾರ್ಕಳ: ಕುಕ್ಕುಂದೂರಿನಲ್ಲಿ ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More