Blog

ಮಾಳದಲ್ಲಿ ಜಿಲ್ಲಾ ಶೈಕ್ಷಣಿಕ ಸಹ ಮಿಲನ್ ಕಾರ್ಯಕ್ರಮ

ವಿದ್ಯಾಭಾರತಿ ಉಡುಪಿ ಜಿಲ್ಲೆ ಹಾಗೂ ಶ್ರೀ ಗುರುಕುಲ ವಿದ್ಯಾವರ್ಧಕ ಸಂಘ ಮಾಳ ಇವರ ಸಂಯುಕ್ತ ಆಶ್ರಯದಲ್ಲಿ*19ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ್ ಕಾರ್ಯಕ್ರಮ- 2026*

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ದಿನಾಂಕ 19/09/2026ರ ಶನಿವಾರದಂದು ನಡೆಯಿತು. ಉಡುಪಿ ಜಿಲ್ಲೆಯ ಸುಮಾರು 34 ವಿದ್ಯಾಸಂಸ್ಥೆಗಳಿಂದ ಮುನ್ನೂರಕ್ಕೂ ಹೆಚ್ಚಿನ ಶಿಕ್ಷಕರು ಮತ್ತು ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಮೂಡುಬಿದಿರೆಯ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ

ಡಾ. ಶರತ್ ಗೋರೆಯವರು ಕಾರ್ಯಕ್ರಮವನ್ನು

ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಭಾರತೀಯ ಉಡುಪಿ ವಿಭಾಗದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಇವರು ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಶಿಕ್ಷಕ

ಶ್ರೀ ನಾಗಭೂಷಣ ಜೋಶಿ, ವಿದ್ಯಾ ಭಾರತೀಯ ಉಪ ಖಜಾಂಚಿ ಟಿ ನಾಗರತ್ನ, ಶ್ರೀಮತಿ ಪ್ರತ್ಯಕ್ಷ ಸುರೇಶ್, ಶಾಲಾ ಸಂಚಾಲಕ ಶ್ರೀ ಸುಧಾಕರ ಡೊಂಗ್ರೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ ಶೆಣೈ, ವಿದ್ಯಾಭಾರತಿ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ,ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿವಿಧ ಅವಧಿಗಳಲ್ಲಿ ಬೋಧಕ ಬೋಧಕೇತರ ವರ್ಗ ಮತ್ತು ಆಡಳಿತ ವರ್ಗದವರಿಗೆ ವಿವಿಧ ಬೌದ್ಧಿಕ ಕಾರ್ಯಕ್ರಮಗಳು ನಡೆದವು ಕ್ರಿಯೇಟಿವ್ ಕಾಲೇಜಿನ ಶ್ರೀ ಅಶ್ವಥ್ ಎಸ್. ಎಲ್, ಶ್ರೀ ಕೃಷ್ಣಮೂರ್ತಿ ಹೈಕಾಡಿ, ಮತ್ತು ಶ್ರೀಮತಿ ಪ್ರತ್ಯಕ್ಷ ಸುರೇಶ್ ಇವರು ವಿವಿಧ ವಿಭಾಗಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಆಡಳಿತ

ಮಂಡಳಿಯವರು,ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು.

ಹಿರಿಯ ಶಿಕ್ಷಕಿ ಶೋಭಾ ಇವರು ನಿರೂಪಿಸಿ, ಶ್ರೀಮತಿ ಪೂರ್ಣಿಮಾ ಶೆಣೈ ಸ್ವಾಗತಿಸಿ, ಶ್ರೀ ಸುಧಾಕರ ಡೋಂಗ್ರೆ

ವಂದನಾರ್ಪಣೆಗೈದರು.

 

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ

ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಗಜಾನನ ಮರಾಠೆ, ಶ್ರೀಮತಿ ಟಿ.ನಾಗರತ್ನ, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಶ್ರೀ ಪಾಂಡುರಂಗ ಪೈ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ ಚಿಪ್ಲೂಣ್ಕರ್, ಆಡಳಿತ ಮಂಡಳಿ ಸದಸ್ಯ ಶ್ರೀ ರಾಮ ಸೇರಿಗಾರ್, ವಿದ್ಯಾ ಭಾರತಿ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗೌರವಿಸಲಾಯಿತು.

ವಿದ್ಯಾ ಭಾರತಿ ಪ್ರಾರ್ಥನಾ ಗೀತೆ ಆಧಾರಿತ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಮೃತ ಭಾರತಿ ಹೆಬ್ರಿ

ದ್ವಿತೀಯ ಸ್ಥಾನ ಶ್ರೀ ಗುರುಕುಲ ಅ. ಹಿ. ಪ್ರಾ ಶಾಲೆ ಮಾಳ,

ತೃತೀಯ ಸ್ಥಾನ ಪಡೆದ ಸಂಸ್ಥೆಗಳ ರಾಮಪ್ಪ ಶಾಲೆ, ಕಾರ್ಕಳ, ಸಂಸ್ಥೆಗಳ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಗಳ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿ ನಿರೂಪಿಸಿದರು ಶ್ರೀ ರಾಮ ಸೇರಿಗಾರ್ ಇವರು ಸ್ವಾಗತಿಸಿ, ಶ್ರೀ ಮಹೇಶ್ ಹೈಕಾಡಿ ವಂದನಾರ್ಪಣೆಗೈದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ನಾಗಭೂಷಣ ಮರಾಠೆ ಅತಿಥಿಗಳಿಗೆ ಸಿಹಿತಿಂಡಿಯ ಗಿಫ್ಟ್ ಪ್ಯಾಕ್ ವ್ಯವಸ್ಥೆಯನ್ನು ಮಾಡಿದ್ದರು ಕ್ರಿಯೇಟಿವ್ ಸಂಸ್ಥಾಪಕ ಶ್ರೀ ಅಶ್ವಥ್ ಮತ್ತು ಶ್ರೀ ನೀಲೇಶ್ ಮಾಳ ಇವರು ಆಧ್ಯಾಪಕರಿಗೆ ನೋಟ್ ಪ್ಯಾಡ್ ಮತ್ತು ಪೆನ್ ಗಳನ್ನು ಪ್ರಾಯೋಜಿಸಿದ್ದರು ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಜೆ ಸಿ ಐ ಇಂಡಿಯಾ ವಲಯ ತರಬೇತಿಧಾರರಾಗಿ ಮನು ಶೆಟ್ಟಿ ಇನ್ನಾ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

ಕಾರ್ಕಳ: ನೇಣು ಬಿಗಿದು ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More