ಕಾರ್ಕಳ

ಕಾರ್ಕಳ: ಕುಕ್ಕುಂದೂರಿನಲ್ಲಿ ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ

ಕಾರ್ಕಳ: ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಎಂಬಲ್ಲಿ ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಾದ ಘಟನೆ ಜೂ.02ರಂದು ವರದಿಯಾಗಿದೆ.

ಕುಕ್ಕುಂದೂರಿನ ಅರುಣ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಹಾಗೂ ಸತೀಶ್ ಕಿಣಿ ಹಾಗೂ ಇತರರು ಸಂಘಟಿತರಾಗಿ ಸರಕಾರಿ ಸ್ಥಳದಲ್ಲಿರುವ ಕಲ್ಲು ಬಂಡೆಗಳನ್ನು ಯಾವುದೆ ಪರವಾನಿಗೆ ಇಲ್ಲದೇ ಶಿಲೆ ಕಲ್ಲುಗಳನ್ನು ಒಡೆದು ಸೈಜ್ ಕಲ್ಲುಗಳನ್ನಾಗಿ ಪರಿವರ್ತಿಸಿ ಸ್ವಂತ ಲಾಭಕ್ಕಾಗಿ ಕಳವು ಮಾಡಿ KA-20-A-7261, KA-20-B-8099 , KA-20-AB-0482 ನೇ ನಂಬ್ರದ ಲಾರಿಗಳಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ.ಸು ಮತ್ತು ಸಂಚಾರ) ಮುರುಳೀಧರ ನಾಯ್ಕ್ ಇವರಿಗೆ ಮೇಲಾಧಿಕಾರಿಯವರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಸೈಜ್ ಕಲ್ಲು ಸಾಗಾಟಕ್ಕೆ ಬಳಸಿದ್ದ KA-20-A-7261, KA-20-B-8099 , KA-20-AB-0482 ನಂಬ್ರದ ಟಿಪ್ಪರ್ ಲಾರಿ ಮತ್ತು ಅದರಲ್ಲಿ ತುಂಬಿಸಿರುವ ಶಿಲೆ ಕಲ್ಲುಗಳು ಸುಮಾರು 95, ಕಲ್ಲನ್ನು ಒಡೆಯಲು ಉಪಯೋಗಿಸಿದ KA-20-P-9742 ನೇ ನಂಬ್ರದ ಕಂಪ್ರೆಶರ್, ಕಲ್ಲುಗಣಿಗಾರಿಕೆ ಮಾಡಲು ಉಪಯೋಗಿಸಿದ ದೊಡ್ಡ ಚಮ್ಮಡಿ -4೪, ಸಣ್ಣ ಸುತ್ತಿಗೆ -2, ಚೇಣ್‌ಗಳು-4, ಕಬಿಣ್ಣದ ಸರಳು -1, ಕಬಿಣ್ಣದ ಹಾರೆ -01, ಡ್ರಿಲ್ಲಿಂಗ್ ಮೇಶಿನ್ -1 ಸಣ್ಣ ಕಬ್ಬಿಣದ ರಾಡ್ -1, ದೊಡ್ಡ ಕಬ್ಬಿಣದ ರಾಡ್ -1 ಇವುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಶ್ವ ಪರಿಸರ ದಿನಾಚರಣೆ

Madhyama Bimba

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Madhyama Bimba

ಬಸ್ರಿ ಶಾಲೆ ಬೈಲೂರು: 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More