Blog

ನ್ಯೂ ಫ್ರೆಂಡ್ಸ್ ಮಿಯ್ಯಾರು ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆ

ಮಿಯ್ಯಾರಿನ ಕುಂಟಿಬೈಲ್‌ನಲ್ಲಿ ನ್ಯೂ ಫ್ರೆಂಡ್ಸ್ ಮಿಯ್ಯಾರು ಇವರ ವತಿಯಿಂದ ಪ್ರಥಮ ವರ್ಷದ ಗಾಂಧಿ ಜಯಂತಿ ಪ್ರಯುಕ್ತ ಹಗ್ಗಜಗ್ಗಾಟ ಸ್ಪರ್ಧೆ ಅದ್ದೂರಿಯಾಗಿ ನಡೆಯಿತು.

ರಮಾಕಾಂತ್ ಶೆಟ್ಟಿ ಕರ್ಮಾರ್ ಕಟ್ಟೆ ಅವರ ಸಹಕಾರದಲ್ಲಿ ಹಾಗೂ ಪ್ರಶಾಂತ್ ಶೆಟ್ಟಿ (ಬಾಬು) ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅವರು ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಬಂಗೇರ, ಪಿಂಗಾರ ಚಿಕನ್ ಮಾಲೀಕರಾದ ಸಂತೋಷ್ ಅಂಚನ್, ಅವಿನಾಶ್ ಶೆಟ್ಟಿ ಕಾರ್ಕಳ ಹಾಗೂ ನ್ಯೂ ಫ್ರೆಂಡ್ಸ್ ಮಿಯ್ಯಾರು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ರಾಜೇಶ್ ಹೆಗ್ಡೆ ಖಂಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಜೂ. 28: ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಮೂಡುಬಿದಿರೆ: ಸೀನಿಯರ್ ಸಿಟಿಜನ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ

Madhyama Bimba

ರತನ್ ಟಾಟಾ ಶ್ರದ್ಧಾಂಜಲಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More