ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೆರ್ವಾಶೆಯಲ್ಲಿ ದಾನಿಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾದ ಕಲಿಕಾ ಪರಿಕರಗಳ ವಿತರಣೆ ಹಾಗೂ ಬೀಳ್ಕೊಡುಗೆ ಸಮಾರಂಭವು ಜು. 18ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ನಾರಾಯಣ ಗುಡಿಗಾರ್ ವಹಿಸಿದ್ದರು.
ವ್ಯಾಘ್ರ ಚಾಮುಂಡಿ ದೈವಸ್ಥಾನದ ಅಧ್ಯಕ್ಷರಾದ ವಿಜಯ್ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು. ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಿದ ಮೇಲ್ಮನೆ ಸಹೋದರರು, ಕೆರ್ವಾಶೆ ಇವರ ಪರವಾಗಿ ರಮಾನಂದ ಗುಡಿಗಾರ್ ಹಾಗೂ ಐಡಿ ಕಾರ್ಡ್ ಮತ್ತು ಬೆಲ್ಟ್ ಒದಗಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘ, ಕೆರ್ವಾಶೆ ಇದರ ಪರವಾಗಿ ಉದಯ್ ಪೂಜಾರಿ ಅವರಿಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ನಂತರ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸೌಮ್ಯ ಎಂ.ಕೆ. ಹಾಗೂ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಮತಿ ಜಯಂತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುನಿತಾ ಪೂಜಾರಿ, ಸುನಿಲ್ ಶೆಟ್ಟಿ, ಧರ್ಮರಾಜ್ ಹೆಗ್ಡೆ, ರಾಮರಾಯ್ ನಾಯಕ್ ಹಾಗೂ ಶ್ರೀಮತಿ ಮಾಲತಿ ಗುಡಿಗಾರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಸ್ವಾಗತಿಸಿ, ಪ್ರಸ್ತಾವನೆ ಸಲ್ಲಿಸಿದರು. ಶ್ರೀಮತಿ ಅಶ್ವಿನಿ ಅಭಿನಂದನಾ ಪತ್ರ ವಾಚಿಸಿ, ವಂದಿಸಿದರು. ಕುಮಾರಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.
