ಕಾರ್ಕಳಹೆಬ್ರಿ

ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಯಾಗ ಹಾಗೂ ಶರಧಿ ಗ್ರಂಥ ಲೋಕಾರ್ಪಣೆ

ಕಾರ್ಕಳ : ಯಜ್ಞ, ದಾನ, ತಪಸ್ಸುಗಳನ್ನು ಮಾಡುವ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ಮನುಷ್ಯ ಜೀವನದಲ್ಲಿ ಆದರ್ಶಯುತವಾಗಿ ಬಾಳಿದಾಗ ಜೀವನ ಪಾವನವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ. 07ರಂದು ನಕ್ರೆ ಬಲಿಪಗುತ್ತು ಶ್ರೀಮತಿ ಮತ್ತು ಶ್ಯಾಮ್ ಎನ್. ಶೆಟ್ಟಿ ಹಾಗೂ ಕುಟುಂಬಸ್ಥರ 25ನೇ ವರ್ಷದ ಚಂಡಿಕಾ ಯಾಗ ಹಾಗೂ ಶರಧಿ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನಗೈದರು.

ಮನುಷ್ಯ ನಿಂತ ನೀರಾಗದೆ ಸದಾ ಚಟುವಟಿಕೆಯಿಂದ ಕೂಡಿ ಸಮಾಜದಲ್ಲಿ ಒಂದಿಷ್ಟು ಸೇವೆಗಳನ್ನು ಮಾಡಿದಾಗ ಜೀವನ ಪರಿಪೂರ್ಣವಾಗಲು ಸಾಧ್ಯ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಶಾಮ್ ಶೆಟ್ಟಿ ಅವರು ತಮ್ಮ ಜೀವಿತದ ಅವಧಿಯಲ್ಲಿ ಸತ್ಕರ್ಮಗಳನ್ನು ಮಾಡುವ ಮೂಲಕ ಇಂದು ಸಮಾಜದಲ್ಲಿ ಗುರುತಿಸಿಕೊಂಡು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿ ಪ್ರಾಂಶುಪಾಲರಾದ ಡಾ. ಮಂಜುನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಲ್ಯದಿಂದಲೇ ಶ್ಯಾಮ್ ಶೆಟ್ಟಿಯವರಿಗೆ ದೊರೆತ ಉತ್ತಮ ಸಂಸ್ಕಾರದಿಂದ ಅವರು ಈ ಮಟ್ಟಕ್ಕೆ ಬೆಳೆಯುವಲ್ಲಿ ಸಹಕಾರಿಯಾಗಿದೆ. ಸಂಸ್ಕಾರ ಹಾಗೂ ಮನೋಸ್ಕಾರಗಳು ಮೇಳೈಸಿದಾಗ ವ್ಯಕ್ತಿತ್ವ ವಿಕಾಸನಗೊಳ್ಳತ್ತದೆ ಎಂದರು.

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಉದ್ಯಮಿ ಸರ್ವೋತ್ತಮ ಶೆಟ್ಟಿ, ಅಬುಧಾಬಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರು ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಕಡಂದಲೆ ಪರಾರಿ, ಪುಣೆ ಬಂಟರ ಸಂಘ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ, ಬೆಳಗಾವಿ ಬಂಟರ ಸಂಘ ಮತ್ತು ಪಡುಬಿದ್ರೆ ಬಂಟರ ಸಂಘ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಉದ್ಯಮಿ, ಸಮಾಜ ಸೇವಕರು ಗಣಪತಿ ಹೆಗ್ಡೆ ಬೋರ್ಕಟ್ಟೆ, ರಂಗಕರ್ಮಿ, ಕಟ್ಟಡ ನಿರ್ಮಾಪಕರು ರಾಜೇಶ್ ರೆಂಜಾಳ, ಉದ್ಯಮಿ ಗಣಪತಿ ಎಮ್. ಪೈ, ಕಾರ್ಕಳ, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುತ್ತಯ್ಯ ನಾಯ್ಕ್, ಉದ್ಯಮಿ, ಸಮಾಜ ಸೇವಕರು ಶ್ರೀಧರ ಶೆಟ್ಟಿ ಅಲೆವೂರು ಅಭಿನಂದನ್, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ರಮೇಶ್ ಭಟ್, ಕಾರ್ಕಳ ಚೇತನ ವಿಶೇಷ ಶಾಲೆಯ ಸಂಚಾಲಕರಾದ ರಘುನಾಥ್ ಎಸ್. ಶೆಟ್ಟಿ, ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕಿ ಶ್ರೀಮತಿ ವನಿತಾ ಶೆಟ್ಟಿ ಗ್ರಂಥ ಪರಿಚಯಗೈದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಜಯಕರ ಮಡಿವಾಳ, ನಾಟಿ ವೈದ್ಯರಾದ ವಿಜಯ್ ಶೆಟ್ಟಿ ನಕ್ರೆ ಪಾದೆಮನೆ, ಅಟೋ ಚಾಲಕರಾದ ಸುಂದರ ಶೆಟ್ಟಿಗಾರ್, ಸೂರಾಜ್ ಶೆಟ್ಟಿ, ಅಶೋಕ್ ಶೆಟ್ಟಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಸುರೇಂದ್ರ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು ಮನೋಜ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಮ್ ಐಲೇಸಾ ಮುಂಬೈ ಮತ್ತು ಬೆಂಗಳೂರಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ವೈಭವ ಕಾರ್ಯಕ್ರಮ ನಡೆದು ನಂತರ ಜೋಡುರಸ್ತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರಿಂದ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಪ್ರಸಾದ್ ಐಸಿರ ಕುಕ್ಕುಂದೂರು ಇವರ ನಿರ್ದೇಶನದಲ್ಲಿ ತುಳು ಸಾಂಸಾರಿಕ ನಾಟಕ ಗಗ್ಗರ ಪ್ರದರ್ಶನಗೊಂಡಿತು.

 

Related posts

ಗಣಿತ ನಗರ :-ಕಾರ್ಕಳ ಜ್ಞಾನಸುಧಾ ಜಂಪ್ ರೋಪ್ ನಲ್ಲಿ ರಾಜ್ಯಮಟ್ಟಕ್ಕೆ

Madhyama Bimba

ಕೆರ್ವಾಶೆ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Madhyama Bimba

ಫುಟ್‌ಬಾಲ್: ಕಾರ್ಕಳ ಜ್ಞಾನಸುಧಾದ ತಂಡ ರನ್ನರ್‌ ಅಪ್- ಬೆಸ್ಟ್‌ಗೋಲ್ ಗೋಲ್‌ಕೀಪರ್ ಅವಾರ್ಡ್ ಪಡೆದ ಪೂಜಿತ್ ಗೌಡ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More