ರೋಟರಿ ಕ್ಲಬ್ ಮೂಡುಬಿದಿರೆ ನೇತೃತ್ವದಲ್ಲಿ ನವರಾತ್ರಿ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾರ್ಯ ನಡೆಸಿ ಸಾಧನೆ ತೋರಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.



ಬೆಳುವಾಯಿ ಆರೋಗ್ಯ ಕೇಂದ್ರದ ನಿವೃತ ನರ್ಸ್ ಕಾವೇರಮ್ಮ, ಹೋಂಗಾರ್ಡ್ ಸುಮನ, ಹೋಟೆಲ್ ಉದ್ಯಮಿ ಪದ್ಮಿನಿ ಪೈ, ಪಡುಮಾರ್ನಾಡು ಪಂಚಾಯತ್ ಕಸ ವಿಲೇವಾರಿ ವಾಹನ ಚಾಲಕಿ ಶ್ವೇತ, ನಿವೃತ ಅಂಗನವಾಡಿ ಕಾರ್ಯಕರ್ತೆ ಭಾರತಿ ಜೈನ್, ವಿಶ್ರಾಂತ ಸಹಾಯಕಿ ಲೀಲಾ ಪೂಜಾರಿ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ರೋಟರಿ ಜಿ ವಿ ಪೈ ಡಯಾಲಿಸಿಸ್ ಯುನಿಟ್ ನ ನಿರೀಕ್ಷಿತ ಪೂಜಾರಿ, ಜಿ ಎನ್ ಭಟ್ ಉಪ್ಪಿನಕಾಯಿ ತಯಾರಕಿ ಕಲಾವತಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್, ಸಹಾಯಕ ಗವರ್ನರ್ ಶ್ರೀಕಾಂತ್ ಕಾಮತ್, ಜಿ.ವಿ.ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ। ಹರೀಶ್ ನಾಯಕ್, ಮುಂಬೈನ ಪ್ರಕಾಶ್ ಪೈ, ರೋಟರಿ ಎಜುಕಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ. ಸಹಿತ ರೋಟರಿ ಸದಸ್ಯರು ಹಾಜರಿದ್ದರು.



