ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಪ್ರವೀಣ್ ಭಂಡಾರಿ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷರಾಗಿರುವ ಡಾ. ಸಿ. ಎಂ. ರಾಜಪ್ರವೀಣ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಐಡೆಂಟಿಟಿ, ಸೋಶಿಯಲ್ ಜಸ್ಟಿಸ್ ಆಂಡ್ ಪೊಲಿಟಿಕಲ್ ಟ್ರಾನ್ಸ್ಫಾರ್ಮೇಷನ್ – ಸ್ಟಡಿ ಆಫ್ ಭಂಡಾರಿ ಕಮ್ಯುನಿಟಿ ಇನ್ ದಕ್ಷಿಣ ಕನ್ನಡ ಆಂಡ್ ಉಡುಪಿ ಡಿಸ್ಟ್ರಿಕ್ಟ್ಸ್ ” ಎಂಬ ವಿಷಯದ ಮೇಲಿನ ಸಂಶೋಧನೆಗೆ ಅವರಿಗೆ ಪಿಎಚ್.ಡಿ. ಪದವಿ ಲಭಿಸಿದೆ.
ಪ್ರೊ ಪ್ರವೀಣ್ ಭಂಡಾರಿ ಯವರು ತಮ್ಮ ಉಪನ್ಯಾಸಕ ವೃತ್ತಿ ಜೀವನವನ್ನು ಶ್ರೀ ಮಹಾವೀರ ಕಾಲೇಜು ಮೂಡಬಿದ್ರಿಯಲ್ಲಿ ಪ್ರಾರಂಭಿಸಿ, ಆಳ್ವಾಸ್ ಕಾಲೇಜು ಮೂಡಬಿದ್ರಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಕರ್ನಾಟಕ ಸರಕಾರದಿಂದ ಕಾಲೇಜು ಶಿಕ್ಷಣ ಇಲಾಖೆಯ ಸೇವೆಗೆ ನೇಮಕಗೊಂಡು ಭದ್ರಾವತಿಯ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
