Blog

ನಾನಿಲ್ತಾರ್ ಕುಲಾಲ ಸಂಘದ ಮಹಾಸಭೆ

ರಾಜ್ಯ ಸರಕಾರ ಕುಂಬಾರ ನಿಗಮಕ್ಕೆ ಅನುದಾನ ಘೋಷಣೆ ಮಾಡಿದ ಕೂಡಲೇ ಆದ್ಯತೆ ಮೇರೆಗೆ ಅನುದಾನ ನೀಡುವುದಾಗಿ ರಾಜ್ಯ ಕುಂಭ ನಿಗಮದ ಅಧ್ಯಕ್ಷ ಶ್ರೀನಿವಾಸ ವೇಲು ಹೇಳಿದ್ದಾರೆ.

 

ಕುಲಾಲ ಸಂಘ ನಾನಿಲ್ತಾರ್ ಇದರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿದ ಅವರು ಕುಂಬಾರ ನಿಗಮ ಆರಂಭಗೊಂಡ ನಂತರ ರಾಜ್ಯದಾದ್ಯoತ ಪ್ರವಾಸ ಮಾಡುತ್ತಿದ್ದು ಆಯಾಯ ಪ್ರದೇಶದ ಕುಂಬಾರರ ಸಮಸ್ಯೆ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದರು.

 

ಸಂಘದ ಅಧ್ಯಕ್ಷತೆಯನ್ನು ಜಯರಾಮ್ ಕುಲಾಲ್ ವಹಿಸಿ ಸಂಘದ ಅಭಿವೃದ್ಧಿ ಹಾಗೂ ಸಹಕಾರ ಬಗ್ಗೆ ತಿಳಿಸಿದರು.

 

ವೇದಿಕೆಯಲ್ಲಿ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾಘು ಮೂಲ್ಯ, ಮುಂಬೈ ಉದ್ಯಮಿ

ಸುನಿಲ್ ಸಾಲ್ಯಾನ್, ಮುಂಬೈ ಜ್ಯೋತಿ ಕೋ ಆಪರೇಟಿವ್ ಚೇರ್ ಮೆನ್ ಗಿರೀಶ್ ಬಿ ಸಾಲ್ಯಾನ್, ಮುಂಬೈ ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ ,

ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್ ವಲಯ, ಮುಂಬೈ ನಾನಿಲ್ತಾರ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಕುಂಭ ನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ಮಣ್ ಅಧ್ಯಕ್ಷ ಕುಶ ಆರ್ ಮೂಲ್ಯ ಇನ್ನ, ನಿವೃತ್ತ ಯೋಧ ರಮೇಶ್ ಕುಲಾಲ್, ಶ್ರೀಮತಿ ದೇವಕಿ ಸುನಿಲ್ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷರಾದ ಚೈತ್ರ ಕುಲಾಲ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೆಲಾಡಿ, ಜಗನ್ನಾಥ್ ಮೂಲ್ಯ ಬೆಳ್ಮಣ್, ಯುವ ಘಟಕದ ಅಧ್ಯಕ್ಷರಾದ ಹರ್ಷಿತ, ಉಪಸ್ಥಿತರಿದ್ದರು

 

ಸನ್ಮಾನ : ಈ ಸಂದರ್ಭದಲ್ಲಿ ಯೋಧ ರಮೇಶ್, ರಾಷ್ಟೀಯ ಕಬಡ್ಡಿ ಕ್ರೀಡಾ ಪಟು ರಮೇಶ್ ಕುಲಾಲ್ ಮಾಳ, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ರಾಂಕ್ ಪಡೆದ ವೈಭವ್ ಕುಲಾಲ್, ಉಷಾ ಮೂಲ್ಯ,ಸಮಾಜ ಸೇವಕ ಪ್ರೇಮ್ ಕುಲಾಲ್, ನಾನಿಲ್ತಾರ್ ಅಭಿಮಾನಿ ಬಳಗದ ಹರೀಶ್ರ, ಉಷಾ ಮೂಲ್ಯರನ್ನು, ಉಷಾ ಮೂಲ್ಯರನ್ನು ಸನ್ಮಾನ ಮಾಡಲಾಯಿತು

 

ಕುಶ ಆರ್ ಮೂಲ್ಯ ಇನ್ನ ಸ್ವಾಗತಿಸಿದರು. ಶ್ರೀಕಾಂತ್ ಮೂಲ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಹರ್ಷಿತ ವಂದನೆ ಸಲ್ಲಿಸಿದರು. ಕಾರ್ಯದರ್ಶಿ ದಿನೇಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

Related posts

ರಾಜು ಶೆಟ್ಟಿ ನಿಧನ

Madhyama Bimba

ಕೋಳಿ ಅಂಕ

Madhyama Bimba

ಆಶ್ರಯ ಮನೆ ವಿತರಣೆ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More