ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮಶಾಲೆ ಕಾರ್ಕಳ ಇಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಇಲ್ಲಿನ ಶ್ರೀಶ್ರೀಶ್ರೀ ಈಶವಿಠಲದಾಸ ಸ್ವಾಮೀಜಿಯವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನುನೆರವೇರಿಸಿ, ಪರಿಸರದ ಬಗ್ಗೆ ಹಿತ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ, ಜೇಸಿ ಪದ್ಮಪ್ರಸಾದ್ ಜೈನ್, ಜೇಸಿ ಅಭಿನಾಶ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀಮತಿ ಮಮತಾ, ಶಾಲಾಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ. ನಂಬೂಧರಿ ಹಾಗೂ ಆಡಳಿತ ಅಧಿಕಾರಿಪ್ರಣಿತ್ ಉಪಸ್ಥಿತರಿದ್ದರು.
