Blog

ಯೋಧ ಸುಬೇದಾರ್ ಸುಜಿತ್ ಪೂಜಾರಿಗೆ ಸನ್ಮಾನ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಂದು ಹುಟ್ಟೂರಿಗೆ ಆಗಮಿಸುತ್ತಿರುವ ವೀರ ಯೋಧ ನಾಯಬ್ ಸುಭೇದಾರ್ ಸುಜಿತ್ ಪೂಜಾರಿ ಅವರಿಗೆ ಭವ್ಯ ಸ್ವಾಗತ ಹಾಗೂ ಹುಟ್ಟೂರ ಸನ್ಮಾನ

 

ಕಾರ್ಕಳ:* ಭಾರತೀಯ ಸೇನೆಯಲ್ಲಿ ಸತತ 16 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ, ಪ್ರಸ್ತುತ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸುತ್ತಿರುವ ಕಾಂತಾವರ ಗ್ರಾಮದ ಬೇಲಾಡಿಯ ವೀರ ಯೋಧ ನಾಯಬ್ ಸುಬೇದಾರ್ ಸುಜಿತ್ ಪೂಜಾರಿ ಅವರಿಗೆ ಇಂದು ದಿನಾಂಕ ನವೆಂಬರ್ 2 ರ ಸೋಮವಾರ ಸಂಜೆ 4.೦೦ ಗಂಟೆಗೆ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವೀರವಂದನೆ, ಹುಟ್ಟೂರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

 

ಬೇಲಾಡಿ ಶಿಕ್ಷಣ ಪ್ರತಿಷ್ಠಾನ (ರಿ.), ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೇಲಾಡಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

 

ಇಂದು ಮಧ್ಯಾಹ್ನ 2.30 ಗಂಟೆಗೆ ಮಂಜರಪಲ್ಕೆ ಕೆದಿಂಜೆಗೆ ಆಗಮಿಸಲಿರುವ ನಾಯಬ್ ಸುಬೇದಾರ್ ಸುಜಿತ್ ಪೂಜಾರಿ ಅವರನ್ನು ಭವ್ಯವಾಗಿ ಸ್ವಾಗತಿಸಿ, ವಾಹನ ಜಾಥಾದ ಮೂಲಕ ಬೇಲಾಡಿ ಶಾಲೆಗೆ ಕರೆತರಲಾಗುವುದು.

 

ದೇಶದ ರಕ್ಷಣೆಗಾಗಿ 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳುತ್ತಿರುವ ವೀರ ಯೋಧನನ್ನು ಗೌರವಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಮಸ್ತ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಜಿಲ್ಲೆಯ 272477 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

Madhyama Bimba

ನಿಟ್ಟೆಯಲ್ಲಿ ಪೊಲೀಸ್ ದಾಳಿ

Madhyama Bimba

ಕರಾವಳಿ ರಂಗಾಯಣ : ತಂತ್ರಜ್ಞರು, ಕಲಾವಿದರ ಆಯ್ಕೆ – ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More