Blog

ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಕಲ್ಲು ಬೆಂಚುಗಳ ಕೊಡುಗೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಎಂ. ಕೆ. ವಿಜಯ ಕುಮಾರ್ ಅವರ ಸ್ಮರಣಾರ್ಥ ಕಲ್ಲು ಬೆಂಚುಗಳ ಕೊಡುಗೆ.

 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್ ರವರು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನ್ಯಾಯಾಂಗ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ, ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿಯ ಸ್ಮರಣಾರ್ಥ ರಾಜ್ಯೋತ್ಸವದ ಸವಿನೆನಪಿಗಾಗಿ, ಕಾರ್ಕಳ ಸ್ವರಾಜ್ ಮೈದಾನದ ಬಳಿ ಕಾರ್ಕಳ ಆಸುಪಾಸಿನ ಜನತೆಗೆ ವಾಕಿಂಗ್ ಮಾಡಿ ಬಂದು ಆರಾಮವಾಗಿ ಕುಳಿತುಕೊಂಡು ಧನಿವಾರಿಸಿಕೊಳ್ಳಲು ಕಲ್ಲಿನ ಬೆಂಚುಗಳನ್ನು ಅವರ ಶಿಷ್ಯವೃಂದ ಮತ್ತು ಅಭಿಮಾನಿಗಳು ಕೊಡುಗೆಯಾಗಿ ನೀಡಿರುತ್ತಾರೆ.

ಈ ನೂತನ ಕಲ್ಲು ಬೆಂಚುಗಳ ಲೋಕಾರ್ಪಣೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ.ವಿ. ಸುನಿಲ್ ಕುಮಾರ್ ನೆರವೇರಿಸಿದರು.

ಕಾರ್ಕಳದಲ್ಲಿ ಎಂ. ಕೆ. ವಿಜಯ ಕುಮಾರ್ ಅವರು ಸಮಾಜಕ್ಕೆ ಮಾಡಿದ ಅನನ್ಯ ಕೆಲಸಗಳು ಮತ್ತು ಅವರ ಹೆಸರು ಶಾಶ್ವತವಾಗಿರಿಸುವಂತೆ ನೂತನ ಕಲ್ಲಿನ ಬೆಂಚುಗಳನ್ನು ಕೊಡುಗೆಯಾಗಿ ನೀಡುವಂತೆ ಮುತುವರ್ಜಿ ವಹಿಸಿ ಕೆಲಸ ಮಾಡಿದ ಪ್ರಕಾಶ್ ರಾವ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್, ನ್ಯಾಯವಾದಿ ಹೆಚ್. ಶೇಖರ್ ಮಡಿವಾಳ್, ಬಿ. ಮಣಿರಾಜ್ ಶೆಟ್ಟಿ, ರಂಜಿತ್ ಪಡಿವಾಳ್ , ಹರೀಶ್ ಅತಿಕಾರಿ,ಎಂ. ಕೆ. ದಿವಿಜೇಂದ್ರ ಕುಮಾರ್, ಎಂ. ಕೆ. ಸುವ್ರತ ಕುಮಾರ್, ಎಂ. ಕೆ. ವಿಪುಲ್ ತೇಜ್, ಪಿ. ಸುಗಂಧ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಉದ್ಯಮಿ ಟಿ. ರಾಮಚಂದ್ರ ನಾಯಕ್, ವಿಜೇಂದ್ರ ಕಿಣಿ,ಪ್ರಭಾತ್ ಕುಮಾರ್, ನಿತ್ಯಾನಂದ ಪೈ, ಗೌತಮ್ ಶೆಟ್ಟಿ, ನವೀನ್ ನಾಯಕ್, ವಿಜಯ ಶೆಟ್ಟಿ, ರಂಜನ್ ಕಾಮತ್, ದಾಮಣ್ಣ ಶೆಟ್ಟಿ, ಭಾಸ್ಕರ್.ಕೆ, ಉಪೇಂದ್ರ ಆಚಾರ್, ಫೆಲಿಕ್ಸ್ ವಾಜ್, ವಿಖ್ಯಾತ್ ಶೆಟ್ಟಿ,ಆನಂದ್ ರಾಯ ನಾಯ್ಕ್, ಪುರಸಭೆಯ ಮಾಜಿ ಸದಸ್ಯರು, ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರವೀಂದ್ರ ಮೊಯ್ಲಿ ಸ್ವಾಗತಿಸಿ ಪ್ರಕಾಶ್ ರಾವ್ ಧನ್ಯವಾದವಿತ್ತರು.

Related posts

ಸುದ್ದಿಯ ಧಾವಂತದಲ್ಲಿ ಸುಳ್ಳು ಸತ್ಯ ವರದಿಗಳ ಆತ್ಮವಲೋಕನ ಅಗತ್ಯ:  ಗಫೂರ್

Madhyama Bimba

ಕುಡಿತದ ಅಮಲಿನಲ್ಲಿ ಬಸ್ಸಿಗೆ ತಡೆಯೊಡ್ಡಿದ ಯುವಕರು- ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ ಪೊಲೀಸರು

Madhyama Bimba

ನಿಟ್ಟೆಯಲ್ಲಿ ಪೊಲೀಸ್ ದಾಳಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More