Blog

ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿ ಪರಾರಿ ವಾಹನ ಪತ್ತೆ

ಕಾರ್ಕಳದ  ಅನು ಫ್ಯೂಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್‌ ಹಾಕಿ ಪರಾರಿ ಆದ ವಾಹನದ ಬಗ್ಗೆ ರೋಹಿತ್ ಮಿಯ್ಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ಕಾರ್ಕಳ ತಾಲೂಕು ಕಚೇರಿ ಬಳಿಯ ರೋಹಿತ್ ರವರ ಪೆಟ್ರೋಲ್ ಬಂಕ್ ನಲ್ಲಿ   ದಿನಾಂಕ 29/08/2024 ರಂದು ಬೆಳಗಿನ ಜಾವ 2:50 ಗಂಟೆಗೆ ಆರೋಪಿ KA-20-ME-8212 ನೇ ನಂಬ್ರದ ಮಹೇಂದ್ರ ಎಕ್ಸ್ ಯು ವಿ 300 ನೇ ಕಾರಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದಿದ್ದು ರೂಪಾಯಿ 4253.88/- ರೂಪಾಯಿ ಪೆಟ್ರೋಲ್‌ ಹಾಕಿಸಿಕೊಂಡ ಬಳಿಕ ಪೆಟ್ರೋಲ್ ಹಾಕಿಸಿದ ಆಕಾಶ್ ಇವರಲ್ಲಿ UPI ಸ್ಕ್ಯಾನರ್‌ ತರುವಂತೆ ಹೇಳಿದ್ದರು.

ಅವರು UPI ಸ್ಕ್ಯಾನರ್‌ ಅನ್ನು ತರಲು ಹೋದಾಗ ಆರೋಪಿಯು ಕಾರನ್ನು ಚಲಾಯಿಸಿಕೊಂಡು ಹೋಗಿ ಪೆಟ್ರೋಲ್ ಹಾಕಿದ ರೂಪಾಯಿ 4253.88/ ರೂಪಾಯಿ ಹಣವನ್ನು ನೀಡದೇ ಮೋಸ ಮಾಡಿ ಪರಾರಿ ಆಗಿದ್ದರು.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 169/2024 ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ವಾಹನದ ಬಗ್ಗೆ ಮಾಹಿತಿ ಪತ್ತೆ ಆಗಿರುವುದಾಗಿ ತಿಳಿದು ಬಂದಿದೆ

Related posts

ಜನರಿಗೆ ಕಾಂಗ್ರೆಸ್ ನೀಡುವ ಯೋಜನೆಗಳನ್ನು ಬಿಜೆಪಿ ಅವಹೇಳನ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ

Madhyama Bimba

ಹಿರ್ಗಾನದ ಆರತಿಯವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Madhyama Bimba

ಕುಚ್ಚೂರು ಶಿವರಾಮ್ ಶೆಟ್ಟಿ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More