ಮುನಿಯಾಲು ಶ್ರೀ ಮಾರಿಯಮ್ನ ದೇವಸ್ಥಾನದಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಚಂಡಿಕಾಯಾಗ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗರಾಜ್ ಪುತ್ರಾಯ ದಂಪತಿಗಳ ಮುತುವರ್ಜಿಯಲ್ಲಿ ಚಂಡಿಕಾಯಾಗ ನೆರವೇರಿದ್ದು, ಜಾರ್ಕಳ ಪ್ರಸಾದ್ ತಾಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ಮಾರಿಯಮ್ಮ ದೇವಸ್ಥಾನದ ಅನು ವಂಶಿಕ ಮೊಕ್ತೇಸರರಾದ ದಿವಾಕರ್. ವೈ. ಶೆಟ್ಟಿ, ಸುಜಯ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ,ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಿನೇಶ್ ಪೈ ಮುನಿಯಾಲು, ಆಜೆಕಾರು ಪಮ್ಮೊಟ್ಟು ಸುಂದರ್ ಶೆಟ್ಟಿ, ಸಮೃದ್ಧಿ ಪ್ರಕಾಶ್ ಶೆಟ್ಟಿ ಹಾಗೂ ಊರ ಸಹಸ್ರ ಭಕ್ತ ವೃಂದ ಉಪಸ್ಥಿತರಿದ್ದರು.

