ಮುಂಡ್ಕೂರು ಮುಲ್ಲಡ್ಕ ಅನಿತಾ ಡಿಮೆಲ್ಲೋ (54), ಮುಲ್ಲಡ್ಕ ಗ್ರಾಮ, ಕಾರ್ಕಳ ಇವರ ಗಂಡ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋ (56) ರವರು ಮೃತ ಪಟ್ಟಿದ್ದಾರೆ.
ದಿನಾಂಕ 12/10/2024 ರಂದು ಬೆಳಿಗ್ಗೆ 9:30 ಗಂಟೆಗೆ ಮನೆಯಲ್ಲಿ ಹಂದಿಗೂಡಿನ ಹತ್ತಿರ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದವರನ್ನು ಅನಿಲ್ ಎಂಬುವವರು ಬೆಳ್ಮಣ್ ನ ಕ್ಲಿನಿಕ್ ಒಂದಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.
ಬಳಿಕ ಅವರನ್ನು ಚಿಕಿತ್ಸೆಗೆ ಬೆಳಿಗ್ಗೆ 10:20 ಗಂಟೆಗೆ ಕಾರ್ಕಳದ ಡಾ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋರವರು ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 49/2024 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
previous post