Blog

ಗಂಡನನ್ನು ಕೊಂದ ಹೆಂಡತಿ

ಅಜೆಕಾರು: ಕೈ ಹಿಡಿದು ಸಪ್ತ ಪದಿ ತುಳಿದ ಗಂಡನನ್ನು ವಿಷ ಉಣಿಸಿ ಬಳಿಕ ಉಸಿರು ಗಟ್ಟಿಸಿ ಕೊಲೆ ಮಾಡಿದ ಘಟನೆ ಮರ್ಣೇ ಗ್ರಾಮದಲ್ಲಿ ನಡೆದಿದೆ.

44 ವರ್ಷದ ಬಾಲಕೃಷ್ಣ ಕೊಲೆ ಆಗಿದ್ದು ಆತನನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನ ಗ್ರಾಮದ ದಿಲೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಮಕೃಷ್ಣ (42ವ ), ಮರ್ಣೆ ಗ್ರಾಮ, ಕಾರ್ಕಳ ಇವರ ಅಣ್ಣ ಬಾಲಕೃಷ್ಣ 44ವ. ರವರಿಗೆ ಕಳೆದ 25 ದಿನಗಳಿಂದ ಜ್ವರ ಮತ್ತು ವಾಂತಿ ಶುರುವಾಗಿದ್ದು ಈ ಬಗ್ಗೆ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಅಲ್ಲಿ ಅವರನ್ನು ಪರಿಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಮಂಗಳೂರು ವೆನ್ಲಾಕ್ ಆಸ್ಪತ್ರೆ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಅಲ್ಲಿ ಅವರು ಗುಣಮುಖರಾಗದ ಕಾರಣ ದಿನಾಂಕ 19/10/2024 ರಂದು ರಾತ್ರಿ ಮನೆಗೆ ಕರೆತಂದಿರುತ್ತಾರೆ. ಈ ಮಧ್ಯೆ ದಿನಾಂಕ 20/10/2024ರಂದು ಬೆಳಗಿನ ಜಾವ 3.30 ಗಂಟೆಗೆ ಬಾಲಕೃಷ್ಣ ರವರು ಮೃತಪಟ್ಟಿದ್ದರು.

ಈ ಘಟನೆ ಬಳಿಕ ಅಲ್ಲಿ ಬಾಲಕೃಷ್ಣರವರು ಸಹಜವಾಗಿ ಮೃತ ಪಡದೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ರಾಮಕೃಷ್ಣರವರು ಪೊಲೀಸ್ ಠಾಣೆ ಗೆ ದೂರು ಸಲ್ಲಿಸಿದ್ದರು.

. ಬಾಲಕೃಷ್ಣ ರವರ ಹೆಂಡತಿ ಪ್ರತಿಮಾಳಿಗೆ ಈ ಮೊದಲು ಹಿರ್ಗಾನದ ದಿಲೀಪ ಎಂಬಾತನ ಜೊತೆ ಗೆಳೆತನ ಇತ್ತು. ಬಾಲಕೃಷ್ಣರು ಒಮ್ಮೆಲೆ ಅಸೌಖ್ಯ ಉಂಟಾಗಿ ಮೃತಪಟ್ಟಿದ್ದರಿಂದ ಸಂಶಯದಿಂದ ಪ್ರತಿಮಳ ಅಣ್ಣ ಸಂದೀಪನು ಪ್ರತಿಮಳಲ್ಲಿ ಪದೇ ಪದೇ ವಿಚಾರಿಸಿದ್ದು, ಈ ಸಮಯ ಪ್ರತಿಮಳು ಅವಳ ಮತ್ತು ದಿಲೀಪ ಅವರ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣನನ್ನು ಕೊಲೆ ಮಾಡಲು ಯೋಚಿಸಿ ಅವರು ಮಾತನಾಡಿಕೊಂಡು ತಾನು ಹೇಳಿದಂತೆ ದಿಲೀಪ ಹೆಗ್ಡೆಯು ಯಾವುದೋ ವಿಷ ಪದಾರ್ಥ ತಂದು ಇದನ್ನು ಬಾಲಕೃಷ್ಣನಿಗೆ ಊಟದಲ್ಲಿ ಹಾಕಿ ಕೊಡು ಅವನು ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ತನಗೆ ಕೊಟ್ಟಿದ್ದು, ಇದನ್ನು ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿರುತ್ತೇನೆ.

ನಂತರ ಬಾಲಕೃಷ್ಣರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ದಿನಾಂಕ 20/10/2024 ರಂದು ಬೆಳಗಿನ ಜಾವ 1.39 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಅಲ್ಲಿಯೆ ಇದ್ದ ಬೆಡ್‌ಶೀಟ್‌ನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಹೇಳಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

ಆಕೆಯ ಅನೈತಿಕ ಚಟುವಟಿಕೆಯಿಂದ ಬಾಲಕೃಷ್ಣ ಜೀವ ಕಳೆದು ಕೊಂಡಂತಾಗಿದೆ

Related posts

ಕುಂಭ ನಿಧಿ ಸೊಸೈಟಿಯಿಂದ ಸ್ವ ಸಹಾಯ ಸಂಘ

Madhyama Bimba

ನಕಲಿ ಪರಶುರಾಮ ಮೂರ್ತಿ ಇಡಲು ಶಾಸಕರಿಗೆ ಕಾಂಗ್ರೇಸ್ ತಿಳಿಸಿತ್ತೆ

Madhyama Bimba

ಆನೆಕೆರೆ ಬಳಿ ಅಪಘಾತ – ವ್ಯಕ್ತಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More