ಕಾರ್ಕಳ

ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ರೋಟ್ರಾಕ್ಟ್ ಕ್ಲಬ್ ಪದಗ್ರಹಣ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಪ್ರಾಯೋಜಿಸಲ್ಪಟ್ಟ ಸರಕಾರಿ ಪಾಲಿಟೆಕ್ನಿಕ್, ಕಾರ್ಕಳ ಇದರ ರೋಟ್ರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವು ಅ. 26ರಂದು ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕುಮಾರ ಕೆ ಎಂ ವಹಿಸಿದ್ದರು. ರೋಟರಿ ಜಿಲ್ಲಾ ರೋಟ್ರಾಕ್ಟ್ ಚೇರ್ಮನ್ ನವೀನ್ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.


ಅತಿಥಿಗಳಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿಯ ಅಧ್ಯಕ್ಷ ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ರೋಟ್ರಾಕ್ಟ್ ಚೇರ್ಮನ್ ಚಿರಾಗ್ ರಾವ್, ಡಿಸ್ಟ್ರಿಕ್ ಡಿಆರ್‌ಆರ್ ಚೇತನ್ ಕುಮಾರ್ ಭಾಗವಹಿಸಿದ್ದರು.


ನೂತನ ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷ ವರುಣ್ ಕುಮಾರ್, ನೂತನ ಕಾರ್ಯದರ್ಶಿ ಮಹೇಶ ನಾಯ್ಕ ಪದಗ್ರಹಣ ಸ್ವೀಕರಿಸಿದರು. ಕಾಲೇಜು ಕಛೇರಿ ಅಧೀಕ್ಷಕರು ವಾಸುದೇವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿ ಪ್ರಶಾಂತ್ ಜೈನ್, ಪೂರ್ವಾಧ್ಯಕ್ಷರು ಸುರೇಂದ್ರ ನಾಯಕ್, ಸುರೇಶ್ ನಾಯಕ್ ಮತ್ತು ಸದಸ್ಯರು ಅಬ್ದುಲ್ ರೆಹಮಾನ್ ಮತ್ತು ಗೀತಾ ರಾವ್ ಭಾಗವಹಿಸಿದ್ದರು.

ಟೀಚರ್ ಕೋಆರ್ಡಿನೇಟರ್ ಚಿತ್ರ ಕುಮಾರ್ ಕೆ.ವಿ. ಸ್ವಾಗತಿಸಿದರು. ಕಾಲೇಜು ಉದ್ಯೋಗಿ ಗುಣಪಾಲ ಜೈನ್ ವಂದಿಸಿದರು. ಕಾಲೇಜು ಉಪನ್ಯಾಸಕರಾದ ಕುಮಾರಿ ಶಿವಾನಿ ಕಾರ್ಯಕ್ರಮದ ನಿರೂಪಿಸಿದರು.

Related posts

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ- ಗಾಯ

Madhyama Bimba

ಅಜೆಕಾರು: ನೇಮೊಟ್ಟು ದಿ| ಸಂಪಾವತಿ ಶೆಡ್ತಿಯವರ ಸ್ಮರಣಾರ್ಥ ಬಸ್ಸುತಂಗುದಾಣ ಉದ್ಘಾಟನೆ

Madhyama Bimba

ಕಾರ್ಕಳ ಬಿಜೆಪಿ ವತಿಯಿಂದ ಡಿ.25ರಂದು ಅಟಲ್ ಸ್ಮರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More