Blog

ಭಾನುವಾರ ಜನನಿ ಮ್ಯಾರಥಾನ್

ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ನಿಟ್ಟೆ ಗ್ರಾಮದ ವಾಂಟ್ರಾಯಿ ಪದವಿನ ‘ಜನನಿ ಮಿತ್ರ ಮಂಡಳಿ (ರಿ.)’ ತನ್ನ ಅರ್ಥಪೂರ್ಣ 25 ವರ್ಷಗಳ ಸುದೀರ್ಘ ಪಯಣದ ಸವಿನೆನಪಿಗಾಗಿ “ರಜತ ಸಂಭ್ರಮ”ವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ 11-01-2026ರ ಭಾನುವಾರದಂದು ಬೃಹತ್ “ಮ್ಯಾರಥಾನ್ ಓಟ 2026” ಅನ್ನು ಆಯೋಜಿಸಲಾಗಿದೆ.

“ಆರೋಗ್ಯದ ಕಡೆ ನಮ್ಮ ಓಟ” ಎಂಬ ಆಶಯದೊಂದಿಗೆ ಆಯೋಜಿತವಾಗಿರುವ ಈ ಕ್ರೀಡಾಕೂಟವು ಆದಿತ್ಯವಾರ ಬೆಳಿಗ್ಗೆ 6.30 ಗಂಟೆಗೆ ಗುಂಡ್ಯಡ್ಕ ವೃತ್ತದಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಸ್ಥಳೀಯ ಯುವಶಕ್ತಿಯನ್ನು ಸಂಘಟಿಸುವ ಮತ್ತು ಸದೃಢ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿರುವ ಈ ಮ್ಯಾರಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. 25 ವರ್ಷಗಳ ಕಾಲ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು, ತನ್ನ ಬೆಳ್ಳಿ ಹಬ್ಬವನ್ನು ಕ್ರೀಡಾ ಚಟುವಟಿಕೆಯ ಮೂಲಕ ಆಚರಿಸುತ್ತಿರುವುದು ವಿಶೇಷವಾಗಿದೆ.

Related posts

ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ

Madhyama Bimba

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮಣಿರಾಜ್ ಶೆಟ್ಟಿ

Madhyama Bimba

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More