ಕಾರ್ಕಳ

ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಬೋಳ- ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾಹಕರ ಸಭೆ

ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಬೋಳ ಇದರ ಗುಂಡ್ಯಡ್ಕ ಶಾಖೆಯ ಒಂದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕಲಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾಹಕರ ಸಭೆ ನ. 3ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬಿ ಸದಾಶಿವ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ನಳಿನಿ ಶೆಟ್ಟಿ, ದಿವ್ಯಾ ನಾಯಕ್ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಯೋಗೀಶ್ ಶೆಟ್ಟಿ, ಸ್ವಸಹಾಯ ಸಂಘದ ತರಬೇತುದಾರರು ಹಾಗೂ ಜಿಲ್ಲಾ ರಾಜೋತ್ಸವ ಪುರಸ್ಕೃತರಾದ ಸುರೇಶ್ ಸಾಲ್ಯಾನ್ ಉಪಸ್ಥಿತರಿದ್ದರು.


ಸ್ವಸಹಾಯ ಸಂಘದ ತರಬೇತುದಾರರು ಹಾಗೂ ಜಿಲ್ಲಾ ರಾಜೋತ್ಸವ ಪುರಸ್ಕೃತರಾದ ಸುರೇಶ್ ಸಾಲ್ಯಾನ್ ಮಾತಾನಾಡಿ ಸ್ವಸಹಾಯ ಸಂಘದ ಪರಿಕಲ್ಪನೆಯು ಜನರ ಅರ್ಥಿಕತೆಯನ್ನು ಮಟ್ಟವನ್ನು ಸುಧಾರಿಸಲು ಪ್ರಾರಂಭಿಸಲಾಯಿತು. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಉತ್ತಮ ರೀತಿಯಲ್ಲಿ ಸಂಘವನ್ನು ನಿರ್ವಹಿಸಿಕೊಂಡು ಹೋಗುವಂತೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬಿ. ಸದಾಶಿವ ಶೆಟ್ಟಿ ಮಾತನಾಡಿ ಕೃಷಿ ಸದಸ್ಯರಿಗೆ ಶೂನ್ಯ ಬಡ್ಡಿದರ ಹಾಗೂ ಮಧ್ಯಮಾವಧಿ ಸಾಲ ಸೌಲಭ್ಯಗಳ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ನಮ್ಮ ಸಂಘವು ಕಳೆದ ೨ ವರ್ಷಗಳಿಂದ ಒಂದು ಕೋಟಿ ಲಾಭವನ್ನು ಗಳಿಸಿ ಸದೃಢವಾಗಿ ಬೆಳೆದು ನಿಂತಿದೆ. ಗ್ರಾಹಕರು ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವ್ಯವಹರಿಸುವಂತೆ ತಿಳಿಸಿದರು.


ಶಾಖಾ ವ್ಯವಸ್ಥಾಪಕಿಯಾದ ಶ್ರೀಮತಿ ಜ್ಯೋತಿಯವರು ಪ್ರಸ್ತಾವಿಕ ಮಾತನಾಡಿ ಗುಂಡ್ಯಡ್ಕ ಶಾಖೆಯು ಒಂದು ಕೋಟಿ ಎಂಬತ್ತು ಲಕ್ಷ ಠೇವಣಾತಿಯನ್ನು ಸಂಗ್ರಹಿಸಿ ಒಂದು ಕೋಟಿ ಇಪ್ಪತ್ತು ಲಕ್ಷ ಸಾಲ ವ್ಯವಹಾರ ಮಾಡಿ ಪ್ರಗತಿ ಪಥದಲ್ಲಿ ಮುಂದುವರಿಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಖೆಯ ಪ್ರಗತಿಗೆ ಸಹಕರಿಸಿದ ಗ್ರಾಹಕರಾದ ರಾಘೂ ಮೂಲ್ಯ, ಪಿಗ್ಮಿ ಸಂಗ್ರಹಕರಾದ ಪ್ರಶಾಂತ ಆಚಾರ್ಯ ಸ್ವಸಹಾಯ ಸಂಘದ ಪ್ರೇರಕಿ ಶ್ರೀಮತಿ ರೇಷ್ಮಾ ಸುರ್ದಶನ್ ಭಂಡಾರಿ ಇವರನ್ನು ಗೌರವಿಸಲಾಯಿತು. ಶ್ರೀನಿಧಿ ಸ್ವಸಹಾಯ ಸಂಘ ಹಾಗೂ ವಿಷ್ಣುಮೂರ್ತಿ ಸ್ವಸಹಾಯ ಸಂಘಗಳಿಗೆ ಶಾಖೆಯ ಉತ್ತಮ ಸಂಘಗಳೆಂದು ಗುರುತಿಸಲಾಯಿತು.

ಪಿಗ್ಮಿ ಸಂಗ್ರಹಕರಾದ ಪ್ರಶಾಂತ ಆಚಾರ್ಯ ಸ್ವಾಗತಿಸಿ, ಸ್ವಸಹಾಯ ಸಂಘದ ಪ್ರೇರಕಿಯಾದ ಶ್ರೀಮತಿ ರೇಷ್ಮಾ ಸುದರ್ಶನ್ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಶೋಭಾ ಭಾಸ್ಕರ್ ಧನ್ಯವಾದ ಸಲ್ಲಿಸಿದರು. ಕು ಅಂಕಿತಾ ಹಾಗೂ ಅನಿಶಾರವರು ಪ್ರಾರ್ಥಿಸಿದರು.

Related posts

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

Madhyama Bimba

ಗ್ರಾಮ ಪಂಚಾಯತ್ ಉಪಚುನಾವಣೆ: ನಿಷೇಧಾಜ್ಞೆ ಜಾರಿ

Madhyama Bimba

ಮತದಾರರ ಪಟ್ಟಿ ಪರಿಷ್ಕರಣೆ: ಹೊಸ ನೋಂದಣಿಗೆ ಅವಕಾಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More