ಪಳ್ಳಿ ಕುಂಟಾಡಿ ಭಾಗದಿಂದ ತಾಲೂಕು ಕೇಂದ್ರವಾದ ಕಾರ್ಕಳಕ್ಕೆ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ದೈನಂದಿನ ಕೆಲಸ ಕಾರ್ಯಗಳಿಗೆ ಆಗಮಿಸುವವರು, ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಕಾರ್ಕಳ ಪೇಟೆಗೆ ಬಂದು ಹೋಗುವ ಜನರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಗಳಿಗಾಗಿದ್ದರು.
ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೇ ತೊಂದರೆಗಳಾಗಿದ್ದ ಜನರ ಕಷ್ಟವನ್ನು ಮನಗಂಡು ಕಾರ್ಕಳ ಕಾಂಗ್ರೆಸ್ ನಾಯಕರಾದ “ಉದಯ ಶೆಟ್ಟಿ ಮುನಿಯಾಲು” ಅವರು ರಾಜ್ಯ ಸರ್ಕಾರದ ಸಾರಿಗೆ ಸಚಿವರಾದ ಸನ್ಮಾನ್ಯ “ರಾಮಲಿಂಗ ರೆಡ್ಡಿಯವರನ್ನು” ಭೇಟಿಯಾಗಿ ಕಾರ್ಕಳ ಕುಂಟಾಡಿ ಪಳ್ಳಿ ಕಣಂಜಾರು ಭಾಗದ ಜನರ ಸಂಕಷ್ಟವನ್ನು ಸಚಿವರಿಗೆ ವಿವರಿಸಿ ಈ ಭಾಗದಲ್ಲಿ ಸರ್ಕಾರಿ ಬಸ್ಸಿನ ಸೇವೆಯನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದರು.
ಉದಯ ಶೆಟ್ಟಿ ಮುನಿಯಾಲು ಅವರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ,ಯವರು ಇಂದಿನಿಂದ ಕಣಂಜಾರು, ಪಳ್ಳಿ ಕುಂಟಾಡಿ ಮಾರ್ಗವಾಗಿ ಕಾರ್ಕಳಕ್ಕೆ ಸರ್ಕಾರಿ ಬಸ್ಸಿನ ಸೇವೆಯನ್ನು ಒದಗಿಸಿ ಕೊಟ್ಟಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ ಯೋಜನೆಯು” ಜನಮನವನ್ನು ಗೆದ್ದಿದ್ದು ಕಾರ್ಕಳದ ಪಳ್ಳಿ ಕುಂಟಾಡಿ ಕಣಂಜಾರು ಭಾಗದ ಜನರು, ಮಹಿಳೆಯರು ಸರ್ಕಾರಿ ಬಸ್ಸಿನ ಸದುಪಯೋಗವನ್ನು ಪಡೆಯಬಹುದಾಗಿದೆ. ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರಿಗೆ ಕಾರ್ಕಳ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆಂದಯ ಪಳ್ಳಿ ಭಾಗದ ಕಾಂಗ್ರೆಸ್ ನಾಯಕರಾದ ವಿಜಯ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.