ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರು ರಾಜ್ಯ ಸರಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರು ಆದರೂ ಸರಕಾರಿ ಬಸ್ ಬಿಡಲು ಅವರಿಂದ ಸಾದ್ಯವಾಗಲಿಲ್ಲ.
ಈಗ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಅನುಷ್ಠಾನಗೊಂಡಿತು
ಜನರ ಆಶೋತ್ತರಗಳು ಈಡೇರಿಕೆಯಾಗಿದೆ.
ಉಚಿತ ಯೋಜನೆಗಳ ಕುರಿತು ಬಿಜೆಪಿಗರಿಂದಲೇ ಟೀಕೆ ಬಂತು. ಆದರೂ ಎದೆಗುಂದಲಿಲ್ಲ. ಉಚಿತಯೋಜನೆಯ ಫಲವಾಗಿ ಖಚಿತವಾಗಿ ರಸ್ತೆಗೆ ಇಳಿಯಿತು ಕೆ ಎಸ್ ಆರ್ ಟಿ ಸಿ. ಬೈಲೂರು-ಪಳ್ಳಿ ಮಾರ್ಗವಾಗಿ ಓಡಾಡುತ್ತಿದೆ ಸರಕಾರಿ ಬಸ್.
ನುಡಿದಂತೆ ನಡೆಯುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂಬುವುದನ್ನು ಕಾರ್ಕಳ ಜನತೆ ಅರಿತುಕೊಂಡಿದ್ದಾರೆ. ಸರಕಾರಿ ಬಸ್ಸ್ ಕೊಡುಗೆ ನೀಡಿದ ಕರ್ನಾಟಕ ಸರಕಾರಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಕೃತಜ್ಞತೆ ಸಲ್ಲಿಸಿದ್ದಾರೆ