ಕಾರ್ಕಳ: ಬೆಳ್ಮಣ್ ಗ್ರಾಮದ ಬೆಳ್ಮಣ್ ಸೊಸೈಟಿ ಬಳಿ ಹಾದು ಹೋಗಿರುವ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಮೋಟಾರ್ ಸೈಕಲ್ ನಂಬ್ರ KA20EZ9342 ನೇದರ ಸವಾರ ಮಾಡಿಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಗನ್ನಾಥ (70) ರವರಿಗೆ ಡಿಕ್ಕಿ ಹೊಡೆದಿದ್ದಾರೆ.
ಇದರ ಪರಿಣಾಮ ಜಗನ್ನಾಥ ಮೂಲ್ಯ ರವರ ತಲೆಗೆ ಒಳಪೆಟ್ಟಾಗಿದ್ದು ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ವಾಹನವನ್ನು ನಿಲ್ಲಿಸದೆ ಮೋಟಾರ್ ಸೈಕಲ್ ಸಮೇತ ಪರಾರಿಯಾಗಿದ್ದಾರೆ.
ಗಾಯಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ.ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.