ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಮೊಟೊ ಕೇಸ್ ದಾಖಲಿಸುವುದನ್ನು ಪ್ರಶ್ನಿಸಲು ಹಿಂಜಾವೇ ಹಮ್ಮಿಕೊಂಡಿದ್ದ ಪ್ರತಿಭಟನಾ ಕರೆ ನೀಡಿದ ಬೆನ್ನಿಗೆ ಈ ರೀತಿಯ ಕೃತ್ಯ ಮಾಡಿರುದನ್ನು ಹಿಂದೂ ಸಮಾಜ ವಿರೋಧಿಸುತ್ತದೆ
ಹಿಂದೂರಾಷ್ಟ್ರದಲ್ಲಿ ಹಿಂದೂಗಳ ಪರ ಮಾತನ್ನಾಡುವುದು ಅಪರಾಧವೇ.? ನಾಚಿಕೆ ಆಗಬೇಕು ಓಲೈಕೆ ಸರಕಾರವನ್ನು ಮೆಚ್ಚಿಸಲು ಕೇಸು ಇನ್ನೂ ಏನೇನೊ ನಾಟಕ ಮಾಡುತೀರಾ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.
ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ ನಿಮ್ಮ ಇಂತಹ ದೊಂಬರಾಟಕ್ಕೆ ಹೆದರುವವರು ನಾವಲ್ಲ. ನಮ್ಮ ಕಾರ್ಯಕರ್ತರಿಗೆ ಹಾಕಿದ ಪ್ರತಿಯೊಂದು ಕೇಸ್ ಗೆ ಇಡೀ ಹಿಂದೂ ಸಮಾಜಕ್ಕೆ ನೀವು ಉತ್ತರಿಸಬೇಕಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನಿಮ್ಮಲ್ಲಿಗೆ ಬರುತೇವೆ. ಅಧಿಕಾರ ದುರಪಯೋಗ ಮಾಡಿ ಒಂದು ಕಡೆ ನೀವು ಮಾಡಿದ್ದೂ ನಿಮಗೆ ಸರಿ ಅನಿಸಿದರೆ ಮತ್ತೊಂದು ಕಡೆ ನಮಗೆ ಉತ್ತರಿಸಲು ನೀವು ಸಿದ್ಧವಾಗಿರಿ.
ಇನ್ನೆಷ್ಟು ಕಾರ್ಯಕರ್ತರಿಗೆ ಕೇಸ್ ದಾಖಲಿಸಬೇಕು ಅಂತ ಇದ್ದೀರಿ ಅನೋದೆ ನಮ್ಮೆಲ್ಲರ ಯಕ್ಷ ಪ್ರಶ್ನೆ. ನಿಮ್ಮ ಇಂಥ ನಾಟಕ ಡೊಂಬರಾಟಗಳು ನಮ್ಮ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಹಿಂದೂ ಸಮಾಜ ಒಗ್ಗಟ್ಟಾಗಿ ಬೀದಿಗಿಳಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾದೀತು.