ಕಾರ್ಕಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಗೋ ರಕ್ಷಾ ವಿಭಾಗ ಹಾಗೂ ಭಜರಂಗದಳ ಗೋ ರಕ್ಷಾ ವಿಭಾಗದ ನೇತೃತ್ವದಲ್ಲಿ ನಡೆದ ಗೋವಿಗಾಗಿ ಹೊರೆಕಾಣಿಕೆ ಕಾರ್ಯಕ್ರಮ ನಿನ್ನೆ ಕಾರ್ಕಳದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿಗಳಾದ ಎಮ್. ಕೆ ವಿಜಯ್ ಕುಮಾರ್, ಉದ್ಯಮಿಗಳಾದ ವಿಜಯ್ ಶೆಟ್ಟಿ, ಕ್ರಿಯೇಟಿವ್ ಕಾಲೇಜು ಸಹ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್, ಉದ್ಯಮಿಗಳಾದ ಅರುಣ್ ನಿಟ್ಟೆ, ದಕ್ಷಿಣ ಪ್ರಾಂತ ಧರ್ಮ ಪ್ರಸಾರ ಪ್ರಮುಖರಾದ ಸುನಿಲ್ ಕೆ ಆರ್, ದೇವಿ ಪ್ರಸಾದ ಶೆಟ್ಟಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಮಂಗಳೂರು, ಕಾರ್ಕಳ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಅಂಬರೀಷ್ ಚಿಪ್ಳುಂಕರ್ ಜಿಲ್ಲಾ ಗೋ ರಕ್ಷಾ ಪ್ರಮುಖರಾದ ಸುನಿಲ್ ನಿಟ್ಟೆ, ತಾಲೂಕು ಕಾರ್ಯದರ್ಶಿ ಪ್ರಸಾದ್ ನಿಟ್ಟೆ, ವಿಶ್ವ ಹಿಂದೂ ಪರಿಷತ್ ಗೋ ರಕ್ಷಾ ಪ್ರಮುಖರಾದ ಹರೀಶ್ ಬೆಲ್ಮನ್, ತಾಲೂಕು ಗೋ ರಕ್ಷಾ ಪ್ರಮುಖರಾದ ಶರತ್ ಸಾಣೂರು ಇವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು.
ನ್ಯಾಯವಾದಿ ಎಮ್ ಕೆ ವಿಜಯ್ ಕುಮಾರ್ ವಿಶ್ವ ಹಿಂದೂ ಪರಿಷತ್ ನ ಮಹತ್ವವನ್ನು ತಿಳಿಸಿದರು. ಸುರಕ್ಷಾ ಇವರು ಕಾರ್ಯಕ್ರಮ ನಿರೂಪಿಸಿ ಸುಧೀರ್ ನಿಟ್ಟೆ ಧನ್ಯವಾದ ತಿಳಿಸಿದರು. ಕಾರ್ಕಳ ತಾಲೂಕಿನ ವಿವಿಧ ಕಡೆಗಳಿಂದ ಒಟ್ಟು ಮಾಡಿದ ಒಣ ಗೋಗ್ರಾಸ ಹಾಗೂ ಹಿಂಡಿಯನ್ನು ಇಪ್ಪತ್ತು ವಾಹನಗಳಲ್ಲಿ ತುಂಬಿಸಿ ಕಾರ್ಕಳ ತಾಲ್ಲೂಕಿನ ನಾಲ್ಕು ಗೋ ಶಾಲೆಗಳಿಗೆ ನೀಡಲಾಯಿತು.
ಸಂಘಟನಾ ಪ್ರಮುಖರಾದ ಚೇತನ್ ಪೆರೇಲ್ಕೆ, ಸುಧೀರ್ ನಿಟ್ಟೆ, ಮನೋಜ್ ಸಾಲ್ಯಾನ್, ಮನೀಶ್ ನಿಟ್ಟೆ ಸುಧೀರ್ ರಾವ್, ಯಶೋಧರ್ ಪೆರೇಲ್ಕೆ, ಬಾಜಪ ಪ್ರಮುಖರಾದ ವಿಖ್ಯಾತ್ ಶೆಟ್ಟಿ, ಅವಿನಾಶ್ ಶೆಟ್ಟಿ, ಹಿತೇಶ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರಾಘವೇಂದ್ರ ಕುಲಾಲ್, ಸುಜಿತ್ ಸಫಲಿಗ, ಹರೀಶ್ ಕಿಚ್ಚ ಉಪಸ್ಥಿತಿ ಇದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.