ಮಿಯ್ಯಾರು ಬಾರ್ ನ ಬಳಿ ಮೃತ ಪಟ್ಟ ವ್ಯಕ್ತಿ ಮಿಯ್ಯಾರು ನೆಲ್ಲಿಗುಡ್ಡೆಯ ನಿವಾಸಿ ಎಂದು ತಿಳಿದು ಬಂದಿದೆ.
ಈ ವ್ಯಕ್ತಿ ಮಿಯ್ಯಾರು ನೆಲ್ಲಿ ಗುಡ್ಡೆಯ ಗೋಪು ಆಚಾರ್ಯ ಆಗಿದ್ದು ಅವರು ಕಳೆದ 4 ದಿನಗಳ ಹಿಂದೆ ಮನೆಯಿಂದ ಹೊರಕ್ಕೆ ಹೋದವರು ಮನೆಗೆ ಹಿಂದಿರುಗಿ ಬಂದಿರಲಿಲ್ಲ.
ಆದರೆ ನಿನ್ನೆ ಅವರ ಮೃತ ದೇಹ ಬಾರ್ ಬಳಿ ಪತ್ತೆ ಆಗಿತ್ತು. ಅವರಿಗೆ 55 ವರ್ಷ ವಯಸ್ಸು ಆಗಿತ್ತು. 4 ದಿನಗಳಿಂದ ಅವರು ನಾಪತ್ತೆ ಆಗಿದ್ದರು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಪೊಲೀಸ್ ಇಲಾಖೆಗೆ ತಲುಪಿಲ್ಲ.
ಅವರು ಪತ್ನಿ ಹಾಗು ಮಕ್ಕಳನ್ನು ಅಗಲಿದ್ದಾರೆ