ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಇದರ 2025ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವದ ವಿಶೇಷ ಸಭೆಯು ಡಿ 2ರಂದು ಶ್ರೀ ಕ್ಷೇತ್ರದಲ್ಲಿ ಅನುವಂಶಿಕ ಆಡಳಿತ ಮುಕ್ತೇಸರರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಎನ್ ಶೆಟ್ಟಿ ಗೇಂದೊಟ್ಟು ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಆಚಾರ್ಯ ನೆಲ್ಲಿಕಾರು ಆಯ್ಕೆಯಾದರು. ಸದಸ್ಯರುಗಳಾಗಿ ಪದ್ಮನಾಭ ಕೋಟ್ಯಾನ್ ಭಕ್ತಪ್ರಿಯ, ಶಶಿಕುಮಾರ್ ಶ್ರೀ ಮಾನಸ ಕಂದಿರು, ಸುರೇಂದ್ರ ಜೆ.ಎನ್ಎಸ್ ಕಂದಿರು , ಸುಶಾಂತ್ ಕರ್ಕೇರ ಮಾರೂರು, ಸುಮಂತ್ ಶಾಂತಿ ಕಂದಿರು, , ವಿಷ್ಣುಮೂರ್ತಿ ರಾವ್ ಶಿರ್ತಾಡಿ, ಮೋನಪ್ಪ ಮೂಡುಕೊಣಾಜೆ ,ಭೋಜ ಅಳಿಯೂರು,ಲೋಕೇಶ್ ಎಲ್ ಎಸ್ ಬೊಟ್ಟು, ಸಂತೋಷ ಕಂದಿರು, ಅಶೋಕ್ ಗುಂಡಡಪ್ಪು, ಶೋಭಾ ಲೋಕೇಶ್, ಶ್ವೇತಾ ಎಚ್. ಶಿರ್ತಾಡಿ, ರಮೇಶ್ ಪಿಲಿಬೆಟ್ಟು ಆಯ್ಕೆಯಾದರು. ಹಾಗೆಯೇ ಇನ್ನಿತರ ಉಪಸಮಿತಿಗಳನ್ನು ರಚಿಸಲಾಯಿತು