ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ನೀಡಿರುವುದನ್ನು ಸಹಿಸಲು ಸಾಧ್ಯ ಇಲ್ಲ – ಕಾರ್ಕಳ ಟೈಗರ್ಸ್
ಪಡುತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೋಟಿಸ್ ನೀಡಿರುವ ಕ್ರಮವನ್ನು ಕಾರ್ಕಳ ಟೈಗರ್ಸ್ ಖಂಡಿಸಿದೆ.
ಈ ಬಗ್ಗೆ ಪುನರ್ ಪರಿಶೀಲನೇ ಮಾಡಿ ನೀಡಿದ ನೋಟೀಸ್ ತಕ್ಷಣ ಹಿಂಪಡೆಯಬೇಕು ಎಂದು ಕಾರ್ಕಳ ಟೈಗರ್ಸ್ ಇಂದು ಬೋಳ ಪ್ರಶಾಂತ್ ಕಾಮತ್ ನೇತೃತ್ವದಲ್ಲಿ ಕಾರ್ಕಳ ಪುರಸಭೆಗೆ ಮನವಿ ಮಾಡಿದೆ.
ಈ ಬಗ್ಗೆ ತಕ್ಷಣ ಸ್ಪಂದನೆ ಮಾಡದಿದ್ದರೆ ಹೋರಾಟ ಅನಿವಾರ್ಯವಾದೀತು ಎಂದು ತಿಳಿಸಿದ್ದಾರೆ
ಕಾರ್ಕಳದ ವೆಂಕಟರಮಣ ದೇವರ ಉತ್ಸವ ನೂರಾರು ವರ್ಷಗಳಿಂದ ಕೂಡ ನಡೆದು ಕೊಂಡು ಬಂದಿದೆ.
ಇಲ್ಲಿನ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲೆ ತಲಾಂತರಗಳಿಂದ ನಡೆದು ಕೊಂಡು ಬಂದ ಪದ್ಧತಿ.
ಪ್ರತಿ ವರ್ಷ ಉತ್ಸವ ಆದ ಬಳಿಕ ಅಲ್ಲಿ ಹಾಕಿದ ಗುರ್ಜಿ ತೆಗೆದು ಗುರ್ಜಿಯ ಹೊಂಡ ಮುಚ್ಚುವ ಕೆಲಸ ಮಾಡಲಾಗುತ್ತದೆ.
ಇದೆಲ್ಲ ತಿಳಿದು ಕೂಡ ಧಾರ್ಮಿಕ ವಿಚಾರದಲ್ಲಿ ಪುರಸಭೆ ಮಾಡಿರುವ ಕೃತ್ಯವನ್ನು ಸಹಿಸಿ ಕೊಳ್ಳಲು ಸಾಧ್ಯ ಇಲ್ಲ ಎಂದು ಅವರು ತಿಳಿಸಿ ಈ ನೋಟಿಸ್ ಹಿಂದಕ್ಕೆ ಪಡೆಯುವಂತೆ ಪುರಸಭೆಗೆ ಮನವಿ ಮಾಡಿದ್ದಾರೆ