ಮೂಡುಬಿದಿರೆ

ಎಕ್ಸಲೆಂಟ್ ಸಿ ಬಿ ಎಸ್ ಇ.  ವಾರ್ಷಿಕೋತ್ಸವ

ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ, ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ’ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ . ಎಂ ಬಿ ಪುರಾಣಿಕ್ ರವರು ಎಕ್ಸಲೆಂಟ್ ಸಿಬಿಎಸ್‌ಈ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು’ ವಿದ್ಯಾರ್ಥಿಯಾದವನು ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಸಮಾಜ, ಗುರು ಹಿರಿಯರು ಹಾಗೂ ಸ್ನೇಹಿತರನ್ನು ಹೊಂದಿರಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ವಿರೂಪಾಕ್ಷಪ್ಪ ರವರು ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದಿರುತ್ತದೆ. ಅದು ಹೊರ ಹೊಮ್ಮಬೇಕಾದರೆ ವ್ಯಕ್ತಿಗೆ ಸೂಕ್ತ ವೇದಿಕೆ ಬೇಕು, ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಬೇಕು. ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿ ಆಗದೇ ಅದು ನೈಜ ರೀತಿಯಲ್ಲಿ ಇರಬೇಕು ಎಂದು ಮುಖ್ಯ ಅತಿಥಿಗಳಾದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷರಾದ  ಕೃಷ್ಣರಾಜ ಹೆಗ್ಡೆಯವರು ಹೇಳಿದರು.

ವಿದ್ಯಾರ್ಥಿಗಳಾದವರು ಓದು ಬರಹದ ಜೊತೆಗೆ ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ಒಳ್ಳೆಯ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಹೆತ್ತವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಬೇಕು ಎಂಬುವುದನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ರವರು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಶುಭ ಹಾರೈಸಿದರು.

ಪ್ರಾಂಶುಪಾಲರಾದ ಸುರೇಷರವರು ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆಯಾದ ಸುಜಾತ, ಆಡಳಿತ ನಿರ್ದೇಶಕರಾದ ಬಿ. ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ ಪುಷ್ಪರಾಜ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಶಾಂತ್ ಪಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ಪೃಥ್ವಿರಾಜ್ ಹಾಗೂ ನಾಯಕಿ ಸಾತ್ವಿಕ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿಯಾದ ಸ್ವಾತಿ ನಿರೂಪಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್ ರವರು ಸ್ವಾಗತಿಸಿ, ಕುಮಾರಿ ಸಾತ್ವಿಕ ರವರು ವಂದಿಸಿದರು.

Related posts

ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

Madhyama Bimba

ಶ್ರೀ ಕ್ಷೇತ್ರಕ್ಕೆ ಇಟ್ಟಲಕ್ಕೆ ಸಾಧ್ವೀ ಸರಸ್ವತಿ ಭೇಟಿ

Madhyama Bimba

ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಂದ ಖಾಸಗಿ ಜಮೀನು ವಶಕ್ಕೆ ಹುನ್ನಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More