ಕಾರ್ಕಳ: ಮಿಯ್ಯಾರು ಅಣ್ಣಾಲಗುಡ್ಡೆ ಬಳಿ ಬೈಕ್‌ನಿಂದ ಕೆಳಬಿದ್ದು ಮಹಿಳೆಯೋರ್ವರು ಗಾಯಗೊಂಡ ಘಟನೆ ವರದಿಯಾಗಿದೆ.
ದಿನಾಂಕ 05.12.2024 ರಂದು ಬೆಳಿಗ್ಗೆ ಸುಮಾರು 08.45 ಗಂಟೆಗೆ ಶಿರ್ಲಾಲಿನ ರಮೇಶ್ ಎಂಬವರು ಕೆಎ.20 ವಿ.2415 ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಶ್ರೀಮತಿ ಸುನಂಧ ಎಂಬುವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದ ಮಿಯ್ಯಾರ್ ಮಹಾಲಿಂಗೆಶ್ವರ ದೇವಸ್ಥಾನದ ಬಳಿ ಗಣಪತಿಕಟ್ಟೆ ಅಣ್ಣಾಲಗುಡ್ಡೆ ಎಂಬಲ್ಲಿ ಕಾರ್ಕಳ ಕಡೆಗೆ ಹೋಗುತ್ತಿದ್ದು ಈ ಸಮಯ ರಸ್ತೆಯಲ್ಲಿ ವಾಹನಕ್ಕೆ ದನ ಅಡ್ಡ ಬಂದಿದೆ. ಇದನ್ನು ಕಂಡ ಅವರು ಮೋಟಾರ್ ಸೈಕಲ್‌ಗೆ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ.
ಆಗ ಹಿಂಬದಿ ಕುಳಿತ್ತ ಸುನಂದ ಇವರು ರಸ್ತೆಯ ಮೇಲೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ನಿಟ್ಟೆ ಗಾಜ್ರಿಯ ಆಸ್ಪತ್ರೆಯ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಅಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.