ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ, ಮಹಿಳಾ ಘಟಕ ಹಾಗು ಯುವ ಘಟಕ ನೇತೃತ್ವದಲ್ಲಿ ಕಾರ್ಕಳದಲ್ಲಿ ಫೆ 23ರಂದು ನಡೆಯಲಿರುವ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಮ್ಯಾಟ್ ಕಬಡ್ಡಿ ಮತ್ತು ಮಹಿಳೆಯರ ತೋಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಶ್ರೀ ವೀರ ಭದ್ರ ದೇವಸ್ಥಾನ ದಲ್ಲಿ ಬಿಡುಗಡೆ ಗೊಳಿಸಲಾಯಿತು.
ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ, ಕಾರ್ಯದರ್ಶಿ ಸತೀಶ್ ಮಡಿವಾಳ, ಮಹಿಳಾ ಘಟಕ ಅಧ್ಯಕ್ಷ ಪುಷ್ಪ ಉದಯ್ ಯುವ ಘಟಕ ಅಧ್ಯಕ್ಷ ಸಂಪತ್ ಮಡಿವಾಳ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.