ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲೆ, ಕುಲಾಲ ಯುವ ವೇದಿಕೆ ಕಾರ್ಕಳ ಕುಲಾಲ ಸಂಘ ಮತ್ತು ಮಹಿಳಾ ಘಟಕ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಕುಲಾಲ ಸಭಾಭವನದಲ್ಲಿ ಗೋಗ್ರಾಸ ಅಭಿಯಾನಕ್ಕೆ ಕಾರ್ಕಳ ಕುಲಾಲ ಸಂಘದ ಗೌರವಾಧ್ಯಕ್ಷರಾದ ಬೋಜ ಕುಲಾಲ್ ಇವರು ಚಾಲನೆಯನ್ನು ನೀಡಿದರು.
ಗೋಗ್ರಾಸವನ್ನು ಶ್ರೀ ವಿಶ್ವೇಶ ಕೃಷ್ಣ ಗೋಶಾಲೆ ಹೆಬ್ರಿ ಇಲ್ಲಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಗೋಶಾಲೆಯ ಆಡಳಿತ ಮಂಡಳಿ ನಿಮ್ಮ ಈ ಸೇವಾ ಕಾರ್ಯ ಅತ್ಯಂತ ಪ್ರಶಂಸನೀಯವಾದದ್ದು ಎಂದು ಹೇಳಿ ಸಂತಸವನ್ನು ವ್ಯಕ್ತಪಡಿಸಿದರು. ಕುಲಾಲ ಕುಂಬಾರ ಯುವ ವೇದಿಕೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ದಿವಾಕರ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಕಳ ಕುಲಾಲ ಯುವ ವೇದಿಕೆ ಅಧ್ಯಕ್ಷರಾದ ಉದಯ ಕುಲಾಲ್ ಮತ್ತು ಕಾರ್ಕಳ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಹೃದಯ ಕುಲಾಲ್ ಮಹಿಳಾ ಘಟಕದ ಅಧ್ಯಕ್ಷರಾಗಿರುವ ವಿನಯ ಕುಲಾಲ್ ಹೆಪ್ರಿಕುಲಾಲ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಯುವ ವೇದಿಕೆಯ ಕಾರ್ಯದರ್ಶಿಯಾಗಿರುವ ಸಂದೇಶ ಕುಲಾಲ್,ವಸಂತ ಕುಲಾಲ್, ರಾಘವೇಂದ್ರ ಕುಲಾಲ್ ಸಾಣೂರು, ದೇವಪ್ಪ ಕುಲಾಲ್ ನಿಟ್ಟೆ ವಿಶ್ವನಾಥ್ ಕುಲಾಲ್ ನಿಟ್ಟೆಮತ್ತು ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು