ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಐಸಿರಿ ಹರೀಶ್ ಜೋಡುರಸ್ತೆ ಇವರನ್ನು ಚೈತನ್ಯ ಕಲಾವಿದರು ಬೈಲೂರು ಇವರ ವತಿಯಿಂದ ಡಿ.10ರಂದು ಅವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಚೈತನ್ಯ ಕಲಾವಿದರು ತಂಡದ ಸಾರಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸನ್ನ ಶೆಟ್ಟಿ ಬೈಲೂರು, ಉದ್ಯಮಿ ದಿನೇಶ್ ಬನಾನ್ ನಕ್ರೆ, ನ್ಯಾಯವಾದಿ ಸದಾನಂದ ಸಾಲಿಯಾನ್ ಬೈಲೂರು ಹಾಗೂ ಚೈತನ್ಯ ಕಲಾವಿದರು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.