
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಇಂದು (ಡಿ. 14) ನಡೆದ ಚುನಾವಣೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಹಿರಿಯ ಸಹಕಾರಿ ಭಾಸ್ಕರ್ ಎಸ್. ಕೋಟ್ಯಾನ್ ನೇತೃತ್ವದ ಬಳಗಕ್ಕೆ ಗೆಲುವು ದೊರೆತಿದೆ.
ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್‌ರವರ ಏಕಮಾತ್ರ ನಾಮಪತ್ರ ಸಲ್ಲಿಕೆಯಿಂದ ಅವಿರೋಧ ಆಯ್ಕೆಯಾಗಿದೆ.
ಉಳಿದ ಕ್ಷೇತ್ರಗಳಲ್ಲಿ 25 ಮಂದಿ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರಲ್ಲಿ ಭಾಸ್ಕರ್ ಕೋಟ್ಯಾನ್ ಬಳಗದ ದಾಮೋದರ ಬಂಗೇರ, ರಾಮ್ ಪ್ರಸಾದ್, ವಾಸುದೇವ ಉಪಾಧ್ಯಾಯ, ಶಿವರಾಮ್ ಹೆಗ್ಡೆ, ಶಂಕರ್ ಶೆಟ್ಟಿ, ಉಷಾ ಡಿ. ಪೈ, ರಮಣಿ ಆಳ್ವ, ಶ್ರೀನಾಥ್, ಅಶೋಕ್ ಶೆಟ್ಟಿ, ಪಾಂಡು, ಸುರೇಶ್ ನಾಯ್ಕ್ ಗೆಲುವು ಸಾಧಿಸಿದ್ದಾರೆ.